September 27, 2022

Newsnap Kannada

The World at your finger tips!

crime,murder,women

Bengaluru: a rowdy sheeter stabbed a female head constable with dragger

ಕೆರೆಗೆ ಹಾರಿ ಪ್ರಾಣ ಬಿಟ್ಟ ಬೆಂಗಳೂರಿನ ಪ್ರೇಮಿಗಳು

Spread the love

ಕೆರೆಗೆ ಹಾರಿ ಯುವಕ, ಯುವತಿ ಸಾವಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಬಳಿಯ ಕೆರೆಯಲ್ಲಿ ನಡೆದಿದೆ.

ಬೆಂಗಳೂರು ವಾಸಿ ನಾಗರತ್ನ (21) ವರ್ಷ ಚರಣ್ (22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ.

ನಿನ್ನೆ ರಾತ್ರಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಯುವಕ-ಯುವತಿ ಕೆರೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾಣೆಯಾಗಿದ್ದರು.

ಇಂದು ಇಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಬ್ಬರ ಮೃತದೇಹಗಳನ್ನ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.

ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಳೆದ ಎರಡು ವರ್ಷಗಳ ಹಿಂದೆಯೇ ಮೃತ ನಾಗರತ್ನ ವಿವಾಹ ಪ್ರಸನ್ನ ಕುಮಾರ್ ಎಂಬಾತನೊಂದಿಗೆ ನಡೆದಿತ್ತು ಎನ್ನಲಾಗಿದೆ.

ಕೊಡಗಿನಲ್ಲಿ ಸಿದ್ದುಗೆ ಬಿಜೆಪಿ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ

ಇನ್ನು ಕಳೆದ ಎರಡು ದಿನಗಳ ಹಿಂದೆ ನಾಗರತ್ನ ನಾಪತ್ತೆಯಾಗಿದ್ದ ಬಗ್ಗೆ ಗಂಡ ಪ್ರಸನ್ನ ಕುಮಾರ್ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !!