December 19, 2024

Newsnap Kannada

The World at your finger tips!

student,sucide,school

Suspicious death of a student in Tamil Nadu, school bus catches fire ತಮಿಳುನಾಡಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು,ಶಾಲಾ ಬಸ್‍ಗೆ ಬೆಂಕಿ #Thenewsnap #Latestnews #Tamil_nadu #Sudent_death #women_assult #Shocking_news #India #Bengaluru #Mandya_news #School

ತಮಿಳುನಾಡಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು,ಶಾಲಾ ಬಸ್‍ಗೆ ಬೆಂಕಿ

Spread the love

ತಮಿಳುನಾಡಿನಲ್ಲಿ ಕಲ್ಲಕುರುಚಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ಸಾವನ್ನಪ್ಪಿದ್ದಾಳೆ . ಶಕ್ತಿ ಇಂಟರ್. ನ್ಯಾಷನಲ್ ಶಾಲೆಯಲ್ಲಿ ಶ್ರೀಮತಿ(17)ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಓದುತ್ತಿದ್ದಳು.ಶಾಲೆಯ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದಳು.

ಕಳೆದ ಮೂರು ದಿನಗಳ ಹಿಂದೆ ಹಾಸ್ಟೆಲ್‍ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿತ್ತು. ಆದರೆ ಘಟನಾ ಸ್ಥಳದಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ. ಬದಲಿಗೆ ಹಾಸ್ಟೆಲ್ ಶೌಚಾಲಯದ ಗೋಡೆ ಮೇಲೆ ರಕ್ತ ಸಿಕ್ತ ಕಲೆಗಳು ಪತ್ತೆಯಾಗಿದೆ.ಇದನ್ನು ಓದಿ –ಬಿಲ್ ಗೇಟ್ಸ್‌ರನ್ನೇ ಹಿಂದಿಕ್ಕಿದ ಗೌತಮ್ ಅದಾನಿ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನ

ನ್ಯಾಯಕ್ಕಾಗಿ ಪೋಷಕರು ಹೋರಾಟ ನಡೆಸುತ್ತಿದ್ದರು. ಈ ಸಂಬಂಧ ಇಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಶಾಲೆಯ 20 ಬಸ್‍ಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾಲೇಜಿನ ಕಿಟಕಿ, ಸಿಕ್ಕ ಸಿಕ್ಕ ವಸ್ತಗಳನ್ನು ಹೊಡೆದು ಹಾಕಿದ್ದಾರೆ.
ಹಿಂಸಾಚಾರ ತಡೆಯಲು ಹೋದ 20 ಮಂದಿ ಪೋಲಿಸ್ ಗಾಯಗೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!