September 29, 2022

Newsnap Kannada

The World at your finger tips!

election,politics,siddu

Siddaramaiah came to the temple after eating meat - BJP propaganda: Siddu ಮಾಂಸ ತಿಂದು ದೇವಸ್ಥಾನಕ್ಕೆ ಬಂದ ಸಿದ್ದರಾಮಯ್ಯ - ಬಿಜೆಪಿ ಅಪಪ್ರಚಾರ : ಸಿದ್ದು

ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ : ಇದು ನನ್ನ ಕೊನೆ ಚುನಾವಣೆ -ಸಿದ್ದರಾಮಯ್ಯ

Spread the love

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಅಲ್ಲದೇ 2023 ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾನುವಾರ ಘೋಷಿಸಿದರು.


ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ , ನಾನು ಚಾಮುಂಡೇಶ್ವರಿಯಿಂದ ಮತ್ತೆ ಚುನಾವಣೆಗೆ ನಿಲಲ್ಲ. ಇದು ವೆರಿ ವೆರಿ ಕ್ಲೀಯರ್..  ಮತ್ತೆ ಮತ್ತೆ ನನ್ನ ಕರೆಯಬೇಡಿ. ಇದನ್ನು ನಿಮ್ಮ ತಲೆಯಿಂದ ತೆಗೆದುಹಾಕಿ, ನನ್ನ ಖುಷಿ ಪಡಿಸೋಕೆ ಕೂಡ ಪದೇ ಪದೇ ಇಲ್ಲಿಗೆ ಬನ್ನಿ ಎಂದು ಕರೆಯಬೇಡಿ. ನಾನು ಯಾರನ್ನೋ ಒಬ್ಬರನ್ನ ನಿಲ್ಲಿಸ್ತೀನಿ, ಅವರನ್ನು ಗೆಲ್ಲಿಸಿ ಅಷ್ಟೇ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಇದನ್ನು ಓದಿ –ತಮಿಳುನಾಡಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು,ಶಾಲಾ ಬಸ್‍ಗೆ ಬೆಂಕಿ

ಇದು ನನ್ನ ಕಟ್ಟ ಕಡೆಯ ಚುನಾವಣೆ. ಅದಾದ ಮೇಲೆ ಯಾವ ಹುದ್ದೆ ಕೊಟ್ಟರೂ ನಾನೂ ಸ್ವೀಕರಿಸಲ್ಲ. ರಾಜ್ಯಸಭೆ ಮೆಂಬರ್ ಆಗಿ ಅಂದರೂ ನಾನು ಆಗಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ನೀವು ನನ್ನನ್ನು ಕೈಬಿಟ್ಟಿರೀ, ಆಗ ಬಾದಾಮಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದರು. ಈಗ ಮತ್ತೆ ನನ್ನ ಕರೆಯುತ್ತಿದ್ದಾರೆ‌. ಇತ್ತ ಕೋಲಾರ, ಕೊಪ್ಪಳ, ಹುಣಸೂರು ಕ್ಷೇತ್ರದವರು ಕರೆಯುತ್ತಿದ್ದಾರೆ. ಎಲ್ಲಾದರೂ ಒಂದು ಕಡೆ ನಿಲ್ತೀನಿ. ಆದರೆ ಚಾಮುಂಡೇಶ್ವರಿಯಲ್ಲಿ ನಿಲ್ಲವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದರು.

error: Content is protected !!