ಮಂಡ್ಯ ಡಿಎಚ್ಒ ಕಿರುಕುಳದ ಶಂಕೆ: ವೈದ್ಯ ನಟರಾಜ್ ಬೆಂಗಳೂರಿನಲ್ಲಿ ಆತ್ಮಹತ್ಯೆ

Team Newsnap
1 Min Read

ಬೆಂಗಳೂರು : ಮಂಡ್ಯ ಡಿಹೆಚ್‌ಒ ಡಾ. ಮೋಹನ್ ಕಿರುಕುಳದಿಂದ ಬೇಸತ್ತ ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಜರುಗಿದೆ .

ನಟರಾಜ್ ಆತ್ಮಹತ್ಯೆಗೆ ಶರಣಾದ ವೈದ್ಯ. ಮಂಡ್ಯ ಆರೋಗ್ಯ ಇಲಾಖೆಯ ವೆಲ್‌ಫೇರ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಹೃದಯಾಘಾತಕ್ಕೊಳಗಾದ ಹಿನ್ನೆಲೆ ಕಳೆದ ಕೆಲ ದಿನಗಳಿಂದ ನಟರಾಜ್ ರಜೆಯಲ್ಲಿದ್ದರು. ಇಂದು ಮಂಡ್ಯಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಆದರೆ ಮಂಡ್ಯ ಡಿಹೆಚ್‌ಒ ಇವರಿಗೆ ರಿಪೋರ್ಟ್ ಮಾಡಿಕೊಳ್ಳದಂತೆ ಸೂಚನೆ ನೀಡಿದ್ದು, ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.ಭ್ರೂಣ ಹತ್ಯೆ ಪ್ರಕರಣ: ಮೈಸೂರಿನ ಹಿಂದಿನ ಡಿಎಚ್ ಓ , ಈಗಿನ ಟಿಎಚ್ ಓ ಸಸ್ಪೆಂಡ್

ಬೆಟ್ಟಸ್ವಾಮಿ ಎಂಬ ಅಧಿಕಾರಿಯನ್ನು ಪಾಂಡವಪುರ ಟಿಹೆಚ್‌ಒ ಆಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಬೆಟ್ಟಸ್ವಾಮಿ ಪಾಂಡವಪುರದಲ್ಲಿ ರಿಪೋರ್ಟ್ ಮಾಡಿಕೊಂಡಿರಲಿಲ್ಲ. ಡಿಹೆಚ್‌ಒ ಬೆಟ್ಟಸ್ವಾಮಿ ಪರವಾಗಿ ಇದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ

Share This Article
Leave a comment