ನಿತ್ಯ ಸಚಿವ ಶಂಕರಗೌಡರ ಪತ್ನಿ ಸುಶೀಲಮ್ಮ ನಿಧನ

Team Newsnap
1 Min Read

ಮಂಡ್ಯದ ಶಿಲ್ಪಿ ನಿತ್ಯ ಸಚಿವ ಕೆ ವಿ ಶಂಕರೇಗೌಡರ ಪತ್ನಿ ಸುಶೀಲಮ್ಮ (88) ಕಳೆದ ಮಧ್ಯರಾತ್ರಿ ನಂತರ ನಿಧನರಾದರು.

ಕೆ ವಿ ಶಂಕರೇಗೌಡರ ಜೊತೆ ಸುಧೀರ್ಘ ಸಹ ಬಾಳ್ವೆ ನಡೆಸಿ ಮಂಡ್ಯದ ಜನರಯೊಂದಿಗೆ ಅತೀವ ಪ್ರೀತಿ ಹೊಂದಿದ್ದ ಸುಶೀಲಮ್ಮನವರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಜೊತೆಗೆ ಮೊಮ್ಮಕ್ಕಳಾದ ಪಿಇಟಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ , ಚೈತ್ರ ಬ್ರೊಚೇರಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೊನ್ನನಾಯಕನಹಳ್ಳಿ ಸಿಂಗ್ರೀಗೌಡರ ಪುತ್ರಿ ಸುಶೀಲಮ್ಮ ಅತ್ಯಂತ ಸರಳ ಸಜ್ಜನ ಸ್ವಭಾವ. ಶಂಕರಗೌಡರ ಎಲ್ಲಾ ಜನಪರ ಕೆಲಸಗಳಿಗೆ ಸಾಥ್ ನೀಡಿದವರು. ಹೃದಯವಂತರಾಗಿದ್ದರು.

ಸುಶೀಲಮ್ಮನವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಮಂಡ್ಯದ ಬಂದೀಗೌಡ ಬಡಾವಣೆಯ ಮೊದಲ ಕ್ರಾಸ್ ನಲ್ಲಿರುವ ನಿವಾಸದಲ್ಲಿ ಇಡಲಾಗಿದೆ. ಸುಮಾರು ಮಧ್ಯಾಹ್ನ 2.30 ರ ವೇಳೆಗೆ ಕೀಲಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.

Share This Article
Leave a comment