ನ್ಯೂಸ್ ಸ್ನ್ಯಾಪ್.
ಮುಂಬೈ.
‘ಸುಶಾಂತ್ ಸಿಂಗ್ ರಜಪೂತ್ ಅವರದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂದು ಅನೇಕ ಮಾಧ್ಯಮದವರು ನನ್ನನ್ನು ಕೇಳಿದ್ದಾರೆ. ನಾನೆಂದು ಸುಶಾಂತ್ ರ ಸಾವನ್ನು ಕೊಲೆ ಎಂದು ಹೇಳಿಲ್ಲ’ ಎಂದು ಸುಶಾಂತ್ ಸಿಂಗ್ ರಜಪೂತ್ ರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ರಿಯಾ ಚಕ್ರವರ್ತಿಯ ಸಂಬಂಧಿ ಎಂ.ಎಸ್. ಚಕ್ರವರ್ತಿಯನ್ನು ನ್ಯಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋದ ಅಧಿಕಾರಿಗಳು ಬಂಧಿಸಿದ ನಂತರ ‘ಜಸ್ಟಿಸ್’ ಎಂಬುದನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಅಂಕಿತಾ ಅವರು “ಸುಶಾಂತ್ ಅವರು ತಮ್ಮನ್ನು ತಾವು ಮಹಾರಾಷ್ಟ್ರ ಹಾಗೂ ಭಾರತೀಯ ಪ್ರಜೆ’ ಎಂದು ಕರೆದುಕೊಳ್ಳುತ್ತಿದ್ದರು. ಪೋಲೀಸರು ಸುಶಾಂತ್ ರ ಸಾವಿನ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಿ, ಸುಶಾಂತ್ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು” ಎಂದು ಕೋರಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಿಯಾ ಚಕ್ರವರ್ತಿಯವರು ಸುಶಾಂತ್ ಗೆ ಡ್ರಗ್ಸ್ ನೀಡುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದರು. ಇದರ ಬಗ್ಗೆ ಬರೆಯುತ್ತಾ “ಒಬ್ಬ ಮಾನಸಿಕ ಖಿನ್ನತೆ ಇರುವ ವ್ಯಕ್ತಿಗೆ ಡ್ರಗ್ಸ್ ಹೇಗೆ ಸಹಕಾರಿಯಾಗುತ್ತದೆ? ಡ್ರಗ್ಸ್ ತೆಗೆದುಕೊಂಡರೆ ಖಿನ್ನತೆ ಹೋಗುತ್ತದಾ” ಎಂದು ಕೇಳುವುದರ ಜೊತೆಗೆ “ಆ ಸಮಯದಲ್ಲಿ ಸುಶಾಂತ್ ಗೆ ತುಂಬಾ ಹತ್ತಿರವಾಗಿದ್ದವರು ರಿಯಾ. ಅವರೇಕೆ ಸುಶಾಂತ್ ರ ತಂದೆ ತಾಯಿಗೆ ಅವರ ಮಾನಸಿಕ ಸ್ಥಿತಿಯ ಬಗ್ಗೆ ವಿವರಿಸಲಿಲ್ಲ?” ಎಂದು ಕೇಳಿದ್ದಾರೆ. ಸುಶಾಂತ್ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ನಾನು ಸುಶಾಂತ್ ಕುಟುಂಬದೊಂದಿಗೆ ಇದ್ದೇನೆ ಎಂದೂ ಅಂಕಿತಾ ಬರೆದುಕೊಂಡಿದ್ದಾರೆ.
More Stories
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ