ಸುಪ್ರೀಂ ತೀರ್ಪು ರಾಜ್ಯಕ್ಕೆ ಮರಣ ಶಾಸನ : ನಿತ್ಯ ತ. ನಾಡಿಗೆ 5000 ಕ್ಯೂಸೆಕ್ಸ್ ನೀರು ಕೊಡಿ : ಕೋರ್ಟ್ ಮಧ್ಯಂತರ ಆದೇಶ

Newsnap Team
2 Min Read

ನವದೆಹಲಿ : ಕಾವೇರಿ ನೀರು ಬಿಡುಗಡೆ ಸಂಬಂಧಿಸಿದಂತೆ ವಾದ ವಿವಾದದ ಆಲಿಸಿದ ಸುಪ್ರೀಂ ಕೋರ್ಟ್ ನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ ಕಾವೇರಿ ನೀರು ಬಿಡುವಂತೆ ತೀರ್ಪು ನೀಡಿದೆ.

ಈ ತೀರ್ಪು ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ.

ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಬೆಳಗ್ಗೆ 10:30ಕ್ಕೆ ಅರಂಭಿಸಿದ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠವು ಕಾವೇರಿ ನದಿ ನೀರು ಪ್ರಾಧಿಕಾರ ನೀಡಿದ್ದ ಆದೇಶವನ್ನೇ
ಸುಪ್ರಿಂಕೋರ್ಟ್‌ನ ಮೂರು ಸದ್ಯಸರ ನ್ಯಾಯಾಪೀಠವು ಎತ್ತಿ ಹಿಡಿದಿದೆ.

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಪ್ರತಿ ದಿನ 5000 ಕ್ಯೂಸೆಕ್ಸ್‌ ನೀರು ನೀರು ಹರಿಸುವಂತೆ ಸುಪ್ರಿಂಕೋರ್ಟ್‌ ನೀಡಿರುವ ಆದೇಶವನ್ನು ಪಾಲಿಸಿದರೆ ರಾಜ್ಯ ರೈತರನ್ನು ದುಸ್ಥಿತಿಗೆ ತಳ್ಳಿದಂತಾಗುತ್ತದೆ

ತೀರ್ಪು ಬರುವವರೆಗೂ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ತಮಿಳುನಾಡು ವಾದ ಮಂಡಿಸುತ್ತಿದೆ.”ಆದರೆ ನಮ್ಮಲ್ಲಿನ ರೈತರಿಗೆ ನೀರು ಇಲ್ಲ. ಈ ಬಾರಿ ಮಳೆ ಕೈಕೊಟ್ಟಿದೆ.ಇಲ್ಲಿನ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ.ಅಷ್ಟು ನೀರು ಬಿಡುವುದಕ್ಕೆ ಆಗುವುದಿಲ್ಲ, ಸಾಮಾನ್ಯ ವರ್ಷದಂತೆ ನೀರು ಬಿಡಲು ತಮಿಳುನಾಡು ಕೇಳುತ್ತಿದೆ” ಎಂದು ಕರ್ನಾಟಕದ ವಾದವಾಗಿದೆ.ಕರ್ನಾಟಕ ಪರ ವಕೀಲ ಶ್ಯಾಮ್ ವಾದ ಮಂಡಿಸಿದರು.

ಇದೇ ವೇಳೆ ಕಾವೇರಿ ನದಿ ನೀರು ಮಧ್ಯಪ್ರವೇಶಕ್ಕೆ ಸುಪ್ರಿಂಕೋರ್ಟ್‌ ನಕಾರ ವ್ಯಕ್ತಪಡಿಸಿದ್ದು, ನಾವು ಪ್ರಕರಣ ಸಂಬಂಧ ಮಧ್ಯಪ್ರವೇಶ ಮಾಡುವುದಕ್ಕೆ ಸಾಧ್ಯವಿಲ್ಲ, ನಾವು ಕೇವಲ ಹದಿನೈದು ದಿನಕ್ಕೆ ಒಂದು ಸಾರಿ ಪರಿಸ್ಥಿತಿಯನ್ನು ಅವಲೋಕಮಾಡುತ್ತೇವೆ ಅಂತ ಹೇಳಿದೆ.

ಇದೇ ವೇಳೆ ನ್ಯಾಯಾಪೀಠದ ಮುಂದೆ ತಮಿಳುನಾಡು ಪರ ವಕೀಲರಾದ ರೋಹಟಗಿ ಅವರು ವಾದ ಮಂಡನೆ ಮಾಡಿ, ನಮಗೆ ಕಡಿಮೆ ಪ್ರಮಾಣದಲ್ಲಿ ನೀರು ಬಿಡುಲಾಗುತ್ತಿದೆ ಅಂತ ಹೇಳಿದರು.ತಲಕಾವೇರಿ ‘ತೀರ್ಥೋದ್ಭವ’ ಅ.17ರಂದು ಮಧ್ಯರಾತ್ರಿ 1.27ಕ್ಕೆ

ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಇಂದು ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರೊಂದಿಗೆ ಭೇಟಿ ಮಾಡಿ ಚರ್ಚಿಸಿದರು.

Share This Article
Leave a comment