June 9, 2023

Newsnap Kannada

The World at your finger tips!

suprem

ವಿವಾಹಿತ, ಅವಿವಾಹಿತ ಮಹಿಳೆಯರಿಗೆ ಗರ್ಭಪಾತ ಹಕ್ಕು-ಸುಪ್ರೀಂ​ ಮಹತ್ವದ ತೀರ್ಪು

Spread the love

ಗರ್ಭಪಾತದ ಬಗ್ಗೆ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಎಲ್ಲಾ ಮಹಿಳೆಯರು ಸುರಕ್ಷಿತ ಹಾಗೂ ಕಾನೂನು ಬದ್ಧ ಗರ್ಭಪಾತಕ್ಕೆ ಅರ್ಹರು ಎಂದು​ ಹೇಳಿದೆ. ನ್ಯಾ. ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಗುರುವಾರ ಮಹತ್ವದ ಆದೇಶ ನೀಡಿದೆ.

1971ರ ಕಾನೂನು ವಿವಾಹಿತ ಮಹಿಳೆಯರಿಗೆ ಸಂಬಂಧಿಸಿದೆ. ಆದರೆ 2021ರಲ್ಲಿ ಕಾನೂನಿಗೆ ಬದಲಾವಣೆ ತರಲಾಗಿದ್ದು, ವಿವಾಹಿತರು, ಅವಿವಾಹಿತರ ನಡುವೆ ಯಾವುದೇ ಬೇಧ ಕಾನೂನಿನಲ್ಲಿ ಮಾಡಿಲ್ಲ. ಕಾನೂನು ಬದ್ಧ ಗರ್ಭಪಾತಕ್ಕೆ ಮಹಿಳೆಯರೆಲ್ಲರೂ ಅರ್ಹರು. ಮಹಿಳೆಯರಿಗೆ ಮುಕ್ತವಾಗಿ ಗರ್ಭಪಾತ ಮಾಡಿಕೊಳ್ಳುವ ಸ್ವಾಯತ್ತತೆ ಇರಬೇಕು. ಬಲವಂತದ ಗರ್ಭಧಾರಣೆಯನ್ನು ವೈವಾಗಿಕ ಅತ್ಯಾಚಾರ ಎಂದು ಪರಿಣಿಸಬೇಕು ಹಾಗೂ ಸಂತ್ರಸ್ಥೆ ಇಚ್ಚಿಸಿದರೆ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.

ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರ ಗರ್ಭಪಾತಕ್ಕೂ ‘ಸುಪ್ರೀಂ’ಅನುಮತಿ ನೀಡಿದೆ , ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನನ್ಸಿ ಆಕ್ಟ್ ಅಡಿ ಬಲವಂತದ ಗರ್ಭಧಾರಣೆಯ ಗರ್ಭಪಾತಕ್ಕೂ ಸುಪ್ರೀಂ ಅಸ್ತು ಎಂದಿದೆ. 24 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂ ಒಪ್ಪಿಗೆ ನೀಡಿದೆ. ನವರಾತ್ರಿಯಲ್ಲಿ ದೇವಿಯ ಒಂಬತ್ತು ಅವತಾರಗಳು 

ಮಹಿಳೆಯ ವೈವಾಹಿಕ ಸ್ಥಿತಿಯು ಆಕೆಯ ಗರ್ಭಪಾತದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಾರದು. ಅವಿವಾಹಿತ ಮಹಿಳೆಯರ ಅನಗತ್ಯ ಗರ್ಭಧಾರಣೆಯನ್ನು ನಿರಾಕರಿಸುವ ಹಕ್ಕನ್ನು ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

error: Content is protected !!