June 5, 2023

Newsnap Kannada

The World at your finger tips!

election , state , politics

ಸುಮಲತಾ ರಾಜ್ಯ ರಾಜಕೀಯ ಪ್ರವೇಶಕ್ಕೆ ಬೆಂಬಲಿಗರ ಗ್ರೀನ್ ಸಿಗ್ನಲ್

Spread the love

ರಾಜ್ಯ ರಾಜಕೀಯದಲ್ಲಿ ಸಂಸದೆ ಸುಮಲತಾ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ನಿಗೂಢವಾಗಿಯೇ ಉಳಿದದೆ.

ಮಂಡ್ಯದಲ್ಲಿ ಮಂಗಳವಾರ ಸಂಸದರ ಆಪ್ತರು ಹಾಗೂ ಬೆಂಬಲಿಗರ ಸಭೆ ನಡೆಸಿ, ರಾಜಕಾರಣಕ್ಕೆ ರೇಬಲ್ ಲೇಡಿ ಎಂಟ್ರಿ ಕೊಡಬೇಕೆ ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ಆಯ್ಕೆ ಮಾಡಬೇಕು ಅಂತ ಅಭಿಪ್ರಾಯ ಹೇಳಿಕೊಂಡಿದ್ದಾರೆ.ಚುನಾವಣೆ ಸಿದ್ದತೆ : 76 ಮಂದಿ ತಹಶೀಲ್ದಾರ್ ವರ್ಗಾವಣೆ 

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನದ ಕಹಳೆ ಮೊಳಗಿಸಿ ಗೆದ್ದು ಬೀಗಿದ್ದ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯದ ಬಗ್ಗೆ ಎಚ್ಚರಿಕೆ ಹೆಜ್ಜೆ ಇಟ್ಟು ಮೂರು ಮುಕ್ಕಾಲು ವರ್ಷದಿಂದಲೂ ಪಕ್ಷದ ಆಯ್ಕೆ ಬಗ್ಗೆ ನಿಗೂಢತೆ ಕಾಯ್ದುಕೊಂಡಿದ್ದ ರೆಬೆಲ್ ಲೇಡಿ, ರಾಜಕೀಯ ನಿರ್ಧಾರದ ಬಗ್ಗೆ ಪ್ರಶ್ನೆ ಎದುರಾದರೆ ಜನರ ಅಭಿಪ್ರಾಯಕ್ಕೆ ಬಿಟ್ಟಿದ್ದು ಅಂತ ಹೇಳುವ ಮೂಲಕ ಕುತೂಹಲ ಹೆಚ್ಚಿಸಿಕೊಂಡೇ ಬಂದಿದ್ದರು.

3 ಪ್ರಮುಖ ನಿರ್ಣಯ :

ಆಪ್ತರು ಹಾಗೂ ಬೆಂಬಲಿಗರು ಸಭೆ ನಡೆಸಿ 3 ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹನಕೆರೆ ಶಶಿ, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 25 ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಭಾಗಿಯಾದ್ದರು , ನೂರಕ್ಕೂ ಹೆಚ್ಚು ಮಹಿಳೆಯರೂ ಪಾಲ್ಗೊಂಡಿದ್ದರು.

ತಮ್ಮ ನಾಯಕಿ ರಾಜ್ಯ ರಾಜಕೀಯಕ್ಕೆ ಬರಬೇಕೆಂಬುದು ಅಭಿಪ್ರಾಯವಾಗಿತ್ತು .

  • 1) ಸುಮಲತಾ ಅಂಬರೀಶ್‌ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು .
  • 2) ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬ ವಿಚಾರ ಗಂಭೀರವಾಗಿ ಚರ್ಚೆ ಆಯ್ತು. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಭಿನ್ನವಾಗಿ ಅಭಿಪ್ರಾಯ ಹೇಳಿದ್ರಿಂದ ಅಂತಿಮವಾಗಿ ಸುಮಲತಾ ಅವರ ನಿರ್ಧಾರಕ್ಕೆ ಬಿಡಲಾಯಿತು.
  • 3)ಯಾವುದೇ ಪಕ್ಷ ಸೇರ್ಪಡೆಯಾದರೂ ಬೆಂಬಲ ನೀಡುತ್ತೇವೆ
  • 4) ಮಂಡ್ಯ, ಮದ್ದೂರು ಅಥವಾ ಮೇಲುಕೋಟೆ ಕ್ಷೇತ್ರದಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕೆಂದು ಒತ್ತಾಯ ವ್ಯಕ್ತವಾಯಿತು.

ಒಟ್ಟಾರೆ ಇಂದಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಅಂತಿಮವಾಗಿ ಕೈಗೊಂಡ ನಿರ್ಣಯಗಳನ್ನು ತಮ್ಮ ನಾಯಕಿಯ ಮುಂದಿಡಲಿದ್ದಾರೆ. ಇದುವರೆಗೂ ಜಾಣ್ಮೆಯಿಂದ ಹೆಜ್ಜೆ ಇಡುತ್ತಾ ಬಂದಿದ್ದ ಸುಮಲತಾ ಅಂಬರೀಶ್‌ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಯಾವ ಪಕ್ಷ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

error: Content is protected !!