December 5, 2022

Newsnap Kannada

The World at your finger tips!

bollywood,actress,independence day

Sunny Leone visit to Hospet on 15th

ಆ15 ರಂದು ಹೊಸಪೇಟೆಗೆ ಸನ್ನಿ ಲಿಯೋನ್ ಭೇಟಿ

Spread the love

ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಆಗಸ್ಟ್ 15ಕ್ಕೆ ವಿಜಯನಗರ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ ಸಮಿತಿವತಿಯಿಂದ ಗುಡ್ಡ ಹತ್ತುವ ಹಾಗೂ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.

ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್​ಗೆ ಆಹ್ವಾನ ನೀಡಲಾಗಿದೆ.ಇದನ್ನು ಓದಿ –ಸಿಎಂ ಬದಲಾವಣೆ ಇಲ್ಲ : ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ- ಅರುಣ್ ಸಿಂಗ್

ವಿಜಯನಗರದಲ್ಲಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ ಸನ್ನಿ ಲಿಯೋನ್ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.

ಆಗಸ್ಟ್ 15ರಂದು ಚಾಂಪಿಯನ್ ಚಿತ್ರತಂಡ ಹೊಸಪೇಟೆಗೆ ಆಗಮಿಸಲಿದೆ.

TAB Sunny leone GN OFFICE7-1635321769167


ಅಷ್ಟೇ ಅಲ್ಲದೇ ಚಾಂಪಿಯನ್ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಸನ್ನಿ ಲಿಯೋನ್ ಆ್ಯಕ್ಟ್ ಮಾಡಿದ್ದಾರೆ. ಹೀಗಾಗಿ ಆಗಸ್ಟ್ 15 ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು ಅಂತಾ ಸ್ವತಃ ಸನ್ನಿ ಲಿಯೋನ್ ಭೇಟಿ ಮಾಡಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಮನವಿ ಮಾಡಿದೆ.

ಇದೇ ವೇಳೆ ಚಾಂಪಿಯನ್ ಚಿತ್ರ ತಂಡಕ್ಕೂ ಸ್ಪರ್ಧೆ ವೇಳೆ ಆಗಮಿಸಲು ಕ್ರಿಯಾಶೀಲ ಸಮಿತಿ ಮನವಿ ಮಾಡಿದೆ ಎಂದಿದ್ದಾರೆ.

ಚಾಂಪಿಯನ್ ಚಿತ್ರದಲ್ಲಿ ಉತ್ತರ ಕರ್ನಾಟಕದ ಹುಡುಗ ಸಚಿನ್ ಧನಪಾಲ್ ನಾಯಕನಾಗಿ, ನಟಿ ಅಧಿತಿ ಪ್ರಭುದೇವ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

error: Content is protected !!