ತೆಲುಗಿನ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆ ಸುನಿತಾ ಉಪದ್ರಸ್ತ ಹಾಗೂ ರಾಮ್ ವೀರಪ್ಪ ನೇನಿ 2021 ರ ಜನವರಿ 9 ರಂದು ಸಪ್ತಪದಿ ತುಳಿಯಲಿದ್ದಾರೆ.
ಗಾಯಕಿ ಸುನಿತಾ ಇತ್ತೀಚಿಗಷ್ಟೆ ಬಹುಕಾಲದ ಗೆಳೆಯ ರಾಮ್ ವೀರಪ್ಪನೇನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಿಶ್ಚಿತಾರ್ಥ ಮಾಡಿಕೊಂಡ ವಿಚಾರವನ್ನು ಸುನಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎರಡನೇ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಕುಟುಂಬದವರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ವಸಮಾರಂಭ ನೇರವೇರಿತ್ತು. ಆದರೆ ಮದುವೆ ಯಾವಾಗ ಎನ್ನುವುದನ್ನು ಬಹಿರಂಗವಾಗಿಲ್ಲರಲಿಲ್ಲ. ಇದೀಗ ಸುನಿತಾ ಮದುವೆ ದಿನಾಂಕ ರಿವೀಲ್ ಆಗಿದೆ.
ಗಾಯಕಿ ಸುನಿತಾ ಮತ್ತು ರಾಮ್ ವೀರಪ್ಪನೇನಿ ಮದುವೆ 2021 ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಸುನಿತಾ ಮತ್ತು ರಾಮ್ ಇಬ್ಬರು ಜನವರಿ 9ರಂದೇ ಹೈದ್ರಾಬಾದ್ ನಲ್ಲಿ ಹಸೆಮಣೆ ಏರಲಿದ್ದಾರೆ.
ಗಾಯಕಿ ಸುನಿತಾ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಶಿಷ್ಯೆ. ಜೊತೆಗೆ ಅವರ ಸಂಬಂಧಿ ಕೂಡ ಆಗಿದ್ದಾರೆ. 42 ವರ್ಷದ ಸುನಿತಾ ಈ ಮೊದಲು ಪತ್ರಕರ್ತ ಕಿರಣ್ ಕುಮಾರ್ ಗೋಪರಾಜ್ ಅವರನ್ನು ಮದುವೆಯಾಗಿದ್ದರು. 19ನೇ ವಯಸ್ಸಿನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುನಿತಾ ಮೊದಲ ಪತಿಯಿಂದ ವಿಚ್ಛೇದನ ಪಡೆದು ಅನೇಕ ವರ್ಷಗಳಾಗಿವೆ.
ಸುನಿತಾ ಭಾವಿ ಪತಿ ರಾಮ್ ವೀರಪ್ಪನೇನಿ ತೆಲುಗಿನ ಪ್ರಸಿದ್ಧ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಕೆಲಸ ಮಾಡುತ್ತಿದ್ದಾರೆ.ಕೆಲವು ವರ್ಷಗಳಿಂದ ರಾಮ್ ಮತ್ತು ಸುನಿತಾ ಇಬ್ಬರು ಪ್ರೀತಿಸುತ್ತಿದ್ದರಂತೆ. ಇದೇ ಪ್ರೀತಿ ಈಗ ಮದುವೆವರೆಗೂ ಬಂದು ನಿಂತಿದೆ.

ಸುನಿತಾಗೆ ಮತ್ತು ಮೊದಲ ಪತಿ ಕಿರಣ್ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.
ಅಮ್ಮ ಭವಿಷ್ಯದ ಬದುಕು ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ಮಕ್ಕಳೇ ಮುಂದೆ ನಿಂತು ಅಮ್ಮ ನಿಗೆ ಎರಡನೇ ಮದುವೆ ಮಾಡಿಸುತ್ತಿದ್ದಾರೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು