ಭಾರತ ಸೆಮಿಫೈನಲ್​ ಹೋಗಬೇಕಾದರೆ ಭಾನುವಾರದ ಮ್ಯಾಚ್ ಗೆಲ್ಲಲೇಬೇಕು

Team Newsnap
1 Min Read

ಪಾಕಿಸ್ತಾನದ ಎದುರು ಸೋತಿರುವ ಟೀಮ್​ ಇಂಡಿಯಾ ಇದೀಗ ಸೆಮಿಫೈನಲ್​ ಆಸೆ ಜೀವಂತವಾಗಿಸಿಕೊಳ್ಳು ವ ಇಕ್ಕಟ್ಟಿಗೆ ಸಿಲುಕಿದೆ.

ಅ.31 ರಂದು ಭಾನುವಾರ ನಡೆಯುವ ಪಂದ್ಯ ಟೀಮ್​ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದು. ಕಿವೀಸ್​ ವಿರುದ್ಧದ ಕದನದಲ್ಲಿ ಜಯಿಸಿದರೆ ಮಾತ್ರ ಟೂರ್ನಿಯಲ್ಲಿ ಭಾರತದ ಹಾದಿ ಸಲೀಸಾಗಿರಲಿದೆ. ಇಲ್ಲದಿದ್ರೆ, ಸೆಮೀಸ್​ ಪ್ರವೇಶಕ್ಕೆ ಟಫ್​​ಫೈಟ್​ ಎದುರಿಸಬೇಕಾಗುತ್ತೆ.

ಈಗಾಗಲೇ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಪಾಕ್​, 2ನೇ ಗುಂಪಿನಿಂದ ಮೊದಲ ತಂಡವಾಗಿ ಸೆಮಿಸ್​ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಭಾರತ- ನ್ಯೂಜಿಲೆಂಡ್​ ಹಣಾಹಣಿಯಲ್ಲಿ ಯಾರು ಜಯ ಗಳಿಸುತ್ತಾರೋ ಅವರಿಗೆ ಸೆಮೀಸ್​ ಪ್ರವೇಶಿಸುವ ಅವಕಾಶ ಹೆಚ್ಚಿರಲಿದೆ.

ಕಿವೀಸ್​ ವಿರುದ್ಧದ ಪಂದ್ಯ ಹೊರತುಪಡಿಸಿದ್ರೆ, ಮುಂದಿನ ಮೂರು ಪಂದ್ಯಗಳನ್ನೂ ಸುಲಭಕ್ಕೆ ಗೆಲ್ಲೋ ಅವಕಾಶ ಟೀಮ್​ ಇಂಡಿಯಾ ಮುಂದಿದೆ.

ಲೀಗ್​ ಹಂತದ ಕೊನೆಯ ಪಂದ್ಯಗಳಲ್ಲಿ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್​, ನಮಿಬೀಯಾ ತಂಡಗಳ ಸವಾಲು ಭಾರತಕ್ಕೆ ಎದುರಾಗಲಿದ್ದು, ಸುಲಭ ಜಯದ ನಿರೀಕ್ಷೆ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿದೆ. ಆದ್ರೆ ಅದಕ್ಕೂ ಮುನ್ನ ಪ್ರಬಲ ಕಿವೀಸ್​ ಪಡೆಯನ್ನು ಭಾರತ ಮಣಿಸಬೇಕಿದೆ.

Share This Article
Leave a comment