ಭಾನುವಾರ ನೋ ಕ್ಲಾಸ್ , ಶಿಕ್ಷಕರಿಗೆ ನೋ ಟೆನ್ಷನ್ – ಪಠ್ಯ ಪೂರ್ಣಗೊಳಿಸಲು ಭಾನುವಾರವೂ ಶಾಲೆ ನಡೆಸಲಾಗುವುದು ಎಂದು ಹೇಳಲಾಗಿತ್ತು.
ಆದರೆ, ಪಠ್ಯ ಕಡಿತಗೊಳಿಸುವುದಿಲ್ಲ ಮತ್ತು ಭಾನುವಾರ ಶಾಲೆ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟಿಸಿದ್ದಾರೆ
ಪಠ್ಯ ಕಡಿತ ಮಾಡುವುದು ಬೇಡವೆಂದು ಶಿಕ್ಷಕರು ಸಲಹೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ಪಠ್ಯ ಕಡಿತ ಮಾಡದಿರಲು ತೀರ್ಮಾನಿಸಲಾಗಿದೆ.
ಪೂರ್ಣ ಪಠ್ಯ ಬೋಧನೆ ಮಾಡಲಾಗುವುದು. ಆದರೆ, ಸಮಯವಿರುವುದರಿಂದ ಪಠ್ಯ ಪೂರ್ಣಗೊಳಿಸಲು ಭಾನುವಾರವೂ ರಜೆ ರದ್ದುಗೊಳಿಸಿ ತರಗತಿ ನಡೆಸುವ ಆಲೋಚನೆ ಇಲ್ಲ. ಶನಿವಾರ ಅರ್ಧದಿನ ಮತ್ತು ಭಾನುವಾರ ಶಾಲೆಗಳಿಗೆ ರಜೆ ಇರುತ್ತದೆ. ಇರುವ ಅವಧಿಯಲ್ಲಿ ಪಠ್ಯ ಪೂರ್ಣಗೊಳಿವುದಾಗಿಶಿಕ್ಷಕರು ಹೇಳಿದ್ದಾರೆ.
ಮುಂದಿನ ವರ್ಷಗಳಲ್ಲಿ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಪಠ್ಯ ಕಡಿತಗೊಳಿಸದೇ ಪೂರ್ಣಪಠ್ಯ ಬೋಧನೆ ಮಾಡಲಾಗುವುದು ಎಂದು ಹೇಳಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು