December 29, 2024

Newsnap Kannada

The World at your finger tips!

fire accident

ಬೆಂಗಳೂರಿನ ಗಾಂಧಿನಗರದ ಸುಖಸಾಗರ್ ಹೋಟೆಲ್​ನಲ್ಲಿ ಅಗ್ನಿ ಅವಘಡ – ಪ್ರಾಣಾಪಾಯ ಇಲ್ಲ

Spread the love

ಗಾಂಧಿನಗರ ಸುಖಸಾಗರ್ ಹೋಟೆಲ್ ನಲ್ಲಿ ಅಗ್ನಿ ಅವಘಡ ಬುಧವಾರ ಮಧ್ಯಾಹ್ನ ಸಂಭವಿಸಿದೆ

ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿ, ಸುಖ ಸಾಗರ್​ ಹೋಟೆಲ್​​ನ ಟರೇಸ್​​ನಲ್ಲಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ

ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೋಟೆಲ್ ಟೆರೇಸ್ ನಲ್ಲಿ
ಮಾಡಿದ್ದ ಸ್ಟೋರ್ ರೂಂ ಮಾಡಲಾಗಿತ್ತು. ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಐದನೇ ಪ್ಲೋರ್​​ಗೆ ಆವರಿಸಿದೆ. ನಾಲ್ಕನೇ ಪ್ಲೋರ್ ನಲ್ಲಿ ಹಳೆ ಪರ್ನಿಚರ್ ಹಾಗೂ ಸೋಫಾ ಇಡಲಾಗಿತ್ತು.

ಹೋಟೆಲ್​​​ನಲ್ಲಿ ಬೆಂಕಿ ಉರಿಯುತ್ತಿರೋದನ್ನ ಗಮನಿಸಿದ್ದ ಎಸ್.ಐ ರವಿ ಅವರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!