ಮೈಷುಗರ್ ನಲ್ಲಿ ಜುಲೈ 6 ರಿಂದ ಕಬ್ಬು ಅರೆಯುವಿಕೆ : ಡಾ: ಕುಮಾರ್

Team Newsnap
1 Min Read

ಮಂಡ್ಯ : ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಸಕಲ ಸಿದ್ಧತೆ ಆಗಿದೆ. ಜುಲೈ 6 ರಿಂದ ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2023- 24 ನೇ ಸಾಲಿನ‌ ಕಬ್ಬು ಅರೆಯುವಿಕೆ ಕುರಿತಂತೆ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಡಿಸಿ ಡಾ. ಕುಮಾರ್ ಮಾತನಾಡಿದರು.

ಮೈಶುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕಬ್ಬು ಕಟಾವನ್ನು ಜುಲೈ 4 ರಿಂದ ಪ್ರಾರಂಭಿಸಲಾಗುವುದು. ಮೈ ಶುಗರ್ ವ್ಯಾಪ್ತಿಗೆ ಬರುವ ಹಳ್ಳಿಗಳ ಕಬ್ಬು ಬೆಳೆಗಾರರು ಕಬ್ಬನ್ನು ಬೇರೆ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.

ಮೈ ಶುಗರ್ ಸಕ್ಕರೆ ಕಾರ್ಖಾನೆ ಅವರು ತಮ್ನ ವ್ಯಾಪ್ತಿಯಲ್ಲಿ ಬರುವ ಹಳ್ಳಿಯ ರೈತರಿಗೆ ಜುಲೈ 4 ರಿಂದ ಕಬ್ಬು ಕಟಾವು ಮಾಡುವ ಬಗ್ಗೆ ಮನವರಿಕೆ ಹಾಗೂ ನೊಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮಾತ್ರ ಕಬ್ಬು ಖರೀದಿಸಲು ಕ್ರಮ ವಹಿಸಬೇಕು. ಅದನ್ನು‌ ಹೊರತುಪಡಿಸಿ ಬೇರೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕಬ್ಬು ಖರೀದಿಸಿ ತೊಂದರೆ ಉಂಟು ಮಾಡಿದರೆ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣ ಕುಮಾರ್, ತಹಶೀಲ್ದಾರ್ ನಿಸರ್ಗ ಪ್ರಿಯಾ,ನರಸಿಂಹ ಮೂರ್ತಿ, ಮೈಶುಗರ್ ಸಕ್ಜರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಕೊರಮಂಡಲ ಸಕ್ಕರೆ ‌ಕಾರ್ಖಾನೆಯ ಬಾಬುರಾಜ್, ರವಿರೆಡ್ಡಿ, ಕೊಪ್ಪ ಎನ್.ಎಸ್.ಸಿ.ಎಲ್ ನ ಸೀನಿಯರ್ ಮ್ಯಾನೇಜರ್ ಸೋಮಶೇಖರ್ ಹೆಚ್. ಎಸ್, ಭಾರತಿನಗರ ಚಾಮುಡೇಶ್ವರಿ ಸಕ್ಕರೆ ಕಾರ್ಖಾನೆಯ ಅಸಿಸೆಂಟ್ ಜನರಲ್ ಮ್ಯಾನೇಜರ್ ಮಹದೇವಪ್ರಭು, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment