ಸುಧಾಮೂರ್ತಿಗೆ ಆರತಿ ಬೆಳಗಿ ಸಂಭ್ರಮಿಸಿದ ಕುಟುಂಬ ವರ್ಗ

Team Newsnap
1 Min Read

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಹಿನ್ನೆಲೆಯಲ್ಲಿ ಬಾಗಲಕೋಟೆಯ ಜಮಖಂಡಿಯಲ್ಲಿನ ಅವರ ಕುಟುಂಬಸ್ಥರು ಸಂಭ್ರಮ ಆಚರಿಸಿದರು.

ಜಮಖಂಡಿ ಕೆಹೆಚ್ ಬಿ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿ ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಕುಟುಂಬ ಸಂತಸ ವ್ಯಕ್ತಪಡಿಸಿದೆ. ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪ್ರಶಸ್ತಿ ಗರಿಮೆ

ಸುಧಾಮೂರ್ತಿ ಅವರ ಅಣ್ಣನ ಮಗ ನಾರಾಯಣ ಕುಲಕರ್ಣಿ, ಪತ್ನಿ ವನಜಾ ಕುಲಕರ್ಣಿ, ಮಗಳು ಶ್ರೇಯಾ ಕುಲಕರ್ಣಿ ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ನೆಲದ ಕೂತು ಆರತಿ ಮಾಡಿಸಿಕೊಂಡ ಸುಧಾಮೂರ್ತಿ, ಆರತಿ ತಟ್ಟೆಗೆ ಹಣ ಹಾಕಿದರು. ಎಸ್ ಎಂ ಕೃಷ್ಣ ಗೆ ‘ಪದ್ಮವಿಭೂಷಣ’ ಸಾಹಿತಿ ಬೈರಪ್ಪ , ಸುಧಾಮೂರ್ತಿಗೆ ಪದ್ಮಭೂಷಣ ಗೌರವ

ಗುರುವಾರ ಅವರು ಬಾಗಲಕೋಟೆಗೆ ಭೇಟಿ ನೀಡಿದ್ದರು. ಹೀಗಾಗಿ ಜಮಖಂಡಿ ನಗರಕ್ಕೆ ಬಂದ ವೇಳೆಯೇ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ಸಂಬಂಧಿಕರ ಸಂತಸ ಇಮ್ಮಡಿಯಾಗಿದೆ. ನಿನ್ನೆ ಜಮಖಂಡಿಯಲ್ಲಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಪಾಂಡರಪುರಕ್ಕೆ ತೆರಳಲಿದ್ದಾರೆ.

Share This Article
Leave a comment