January 10, 2025

Newsnap Kannada

The World at your finger tips!

hijab

ವಿದ್ಯಾರ್ಥಿಗಳು ಹಿಜಾಬ್​, ತಿಲಕ, ಕುಂಕುಮ, ಜನಿವಾರ ಹಾಕಬಾರದು- ನಟ ಚೇತನ್ ಕರೆ

Spread the love

ಕಾಲೇಜಿಗೆ ಯಾವ ವಿದ್ಯಾರ್ಥಿಯೂ ಹಿಜಾಬ್​, ತಿಲಕ, ಕುಂಕುಮ, ಜನಿವಾರ ಹಾಕಬಾರದು ಎಂದು ನಟ ಚೇತನ್ ಕರೆ

ಹಿಜಾಬ್​ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟ ಚೇತನ್​​, ಹಿಜಾಬ್​ ಜೊತೆಗೆ ಕರ್ನಾಟಕದ ಯಾವುದೇ ವಿದ್ಯಾರ್ಥಿಯೂ ಹಣೆಯ ಮೇಲೆ ಕುಂಕುಮ, ಬೊಟ್ಟು, ವಿಭೂತಿ, ತಿಲಕ, ಕೂದಲಿಗೆ ಹೂ ಮುಡುವುದು, ಕಾಣುವಂತೆ ಜನಿವಾರ, ಲಿಂಗ, ಕ್ರಾಸ್​ ಇತ್ಯಾದಿಗಳನ್ನು ತರಗತಿಯಲ್ಲಿ ಧರಿಸಲು ಅನುಮತಿ ನೀಡಬಾರದು ಎಂದು ಚೇತನ್ ಹೇಳಿಕೆ.

ಏಕರೂಪತೆ ಹಾಗೂ ನಿಜವಾದ ಜಾತ್ಯತೀತತೆಗಾಗಿ, ಬಹುಸಂಖ್ಯಾತ, ಅಲ್ಪಸಂಖ್ಯಾತ, ಎಲ್ಲಾ ಧಾರ್ಮಿಕ ಗುರುತುಗಳನ್ನು ಸಾರ್ವಜನಿಕ ಶಾಲೆಗಳಿಂದ ಹೊರಗಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!