ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ.
ನೃಪತುಂಗ ರಸ್ತೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಇ ವಿದ್ಯಾರ್ಥಿ ಪವನ್ ಕಲ್ಯಾಣ್ ಕೊಲೆ ಆರೋಪಿ. ಪ್ರೆಸಿಡೆನ್ಸಿ ಕಾಲೇಜಿನ ಲಯಸ್ಮಿತ (19) ಮೃತ ಯುವತಿ.ಹೊಸ ವರ್ಷದ ಪಾರ್ಟಿಗೆ ಹೋದ ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವು
ಈ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರೀತಿ ವಿಚಾರಕ್ಕೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ರಾಜಾನುಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ, ಗಾಯಾಳು ವಿದ್ಯಾರ್ಥಿಯನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಹ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ.
19 ವರ್ಷದ ಲಯಸ್ಮಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದಳು. ಇಂದು ಅಲ್ಲಿಗೆ ಬಂದಿದ್ದ ಸ್ಪರ್ಶ್ ಕ್ಲಾಸ್ ರೂಮಿನಲ್ಲಿದ್ದ ಲಯಸ್ಮಿತಾಗೆ ಹೊರಗೆ ಬರಲು ಹೇಳಿದ್ದಾನೆ. ಆಕೆ ಬಂದ ಕೂಡಲೇ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಬಳಿಕ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಸ್ಥಳಕ್ಕಾಗಿಮಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪವನ್ ಕಲ್ಯಾಣ್ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ
- ಮಂಡ್ಯದಲ್ಲಿ ಬಿಜೆಪಿ ನಾಯಕರಿಂದ ಚಡ್ಡಿ ಮೆರವಣಿಗೆ : ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ