December 23, 2024

Newsnap Kannada

The World at your finger tips!

rahul bandari

ತಲೆಗೆ ಗನ್​​ನಿಂದ ಶೂಟ್​​​ ವಿದ್ಯಾರ್ಥಿ ಸಾವು​​; ಮಾನಸಿಕ ಒತ್ತಡವೇ ಆತ್ಮಹತ್ಯೆಯ ಶಂಕೆ?

Spread the love

ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಒಂದಿಲ್ಲೊಂದು ಅಪರಾಧ ಪ್ರಕರಣಗಳು ಜರುಗುತ್ತಲೇ ಇವೆ.

ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನ ಸದಾಶಿವನಗರ ವಿದ್ಯಾರ್ಥಿಯೊಬ್ಬ ತಲೆಗೆ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಈ ಘಟನೆಯು ಸಂಜಯ್ ನಗರದ ನಂದಿನಿ ಬೂತ್ ಹತ್ತಿರ ಘಟನೆ ಜರುಗಿದೆ. ಪುಟ್ ಪಾತ್ ಮೇಲೆ ತಲೆಗೆ ಗುಂಡು ಹಾರಿಸಿಕೊಂಡು ಈ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಹುಲ್ ಭಂಡಾರಿ ಮೃತ ಯುವಕ, ಮಿಲ್ಟ್ರಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಭಗತ್ ಸಿಂಗ್ -ಬಾಬ್ನಾ ದಂಪತಿಯ ಮಗ ರಾಹುಲ್ ಭಂಡಾರಿ. ಭಗತ್ ಸಿಂಗ್ ಉತ್ತರಾಖಂಡ ಮೂಲದವರು. ಬೆಂಗಳೂರಿಗೆ ಬಂದು 20 ವರ್ಷವಾಗಿತ್ತು. ಭಗತ್ ಸಿಂಗ್ ನಿವೃತ್ತ ಆರ್ಮಿ ಮ್ಯಾನ್ ಆಗಿದ್ದಾರೆ.

ಆರ್.ಟಿ ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಹತ್ತನೇ ತರಗತಿಯಲ್ಲಿ ಶೇ.90% ರಷ್ಟು ಅಂಕ‌ ಪಡೆದಿದ್ದ ಉನ್ನತ ದರ್ಜೆ ಸ್ಟೂಡೆಂಟ್ ಆಗಿದ್ದರು. ಮನೆಯಲ್ಲಿಯೂ ಓದಬೇಕು ಎನ್ನುವ ಒತ್ತಡ ಇರಲಿಲ್ಲ. ಆದರು ಮಾನಸಿಕ‌ ಒತ್ತಡಕ್ಕೆ ಒಳಗಾಗಿದ್ದ ಅನ್ನೋ ಶಂಕೆ ವ್ಯಕ್ತವಾಗಿದೆ.

17 ವರ್ಷದ ರಾಹುಲ್ ದ್ವಿತೀಯ ಪಿಯುಸಿ ಓದುತ್ತಿದ್ದ. ಪ್ರತಿ ದಿನ ರಾತ್ರಿ ಹೊತ್ತಿನಲ್ಲಿ ಓದುತ್ತಿದ್ದ. ಸ್ಟ್ರೆಸ್ ಜಾಸ್ತಿಯಾದಾಗ ಹೊರಗಡೆ ವಾಕಿಂಗ್ ಮಾಡುತ್ತಿದ್ದ. ಇವತ್ತು ಕೂಡ 4 ಗಂಟೆ ಸುಮಾರಿಗೆ ಹೊರಗಡೆ ಬಂದಿದ್ದ. ಬೆಳಿಗ್ಗೆ ಗಂಟೆಯಿಂದ ಸತತವಾಗಿ ಮೃತ ಯುವಕನಿಗೆ ತಾಯಿ ಕರೆ ಮಾಡಿದ್ದರು ತೆಗೆದಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!