ಮಹತ್ವದ ಜಿಎಸ್ ಟಿ : ಪೆಟ್ರೋಲ್, ಡೀಸೆಲ್ ಬೆಲೆ 30 ರು ಇಳಿಕೆ ?

Team Newsnap
1 Min Read

ಪೆಟ್ರೋಲ್, ಡೀಸೆಲ್ ಸೇರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಶುಕ್ರವಾರ ಹಣಕಾಸು ಸಚಿವೆ ನಿರ್ಮಲ ಸೀತಾರಾಂ ಅಧ್ಯಕ್ಷತೆಯಲ್ಲಿ ನಡೆಯುವ ಜಿಎಸ್ ಟಿ ಮಂಡಳಿಯ ಮಹತ್ವದ ಸಭೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಚರ್ಚೆ ನಡೆಯಲಿದೆ, ಜಿಎಸ್ ಟಿ ಅಡಿಯಲ್ಲಿ ತೈಲೋತ್ಪನ್ನ ಸೇರ್ಪಡೆ ಆದರೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 30 ರು . ವರೆಗೂ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದಿನ ಸಭೆಯಲ್ಲಿ ಕೊರೊನಾ ಔಷಧ ಸಾಮಾಗ್ರಿಗಳು ಸೇರಿದಂತೆ 48 ವಸ್ತುಗಳ ತೆರಿಗೆ ದರಗಳ ಪರಿಶೀಲನೆಯ ಬಗ್ಗೆಯೂ ಚರ್ಚೆ ನಡೆಯಲಿದೆ,

ಮೊಬೈಲ್ ಆ್ಯಪ್ ಮೂಲಕ ಆಹಾರ ಡೆಲಿವರಿ ಸೇವೆ ಒದಗಿಸುತ್ತಿರುವ ಝೊಮೆಟೊ, ಸ್ವಿಗ್ವಿಯನ್ನು ರೆಸ್ಟೋರೆಂಟ್ ನಂತೆ ಪರಿಗಣಿಸಿ ಶೇ. 5 ರಷ್ಟು ಜಿಎಸ್ ಟಿ ವಿಧಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Share This Article
Leave a comment