February 21, 2026

Newsnap Kannada

The World at your finger tips!

srini

‘ಸಾಯ್ತಿದ್ದೀನಿ.. ನನ್ನ ಬ್ಯಾನರ್​​ ಹಾಕ್ಸಿ ಫ್ರೆಂಡ್ಸ್​​​’ – ಸಂದೇಶ ಕಳಿಸಿ ವಿದ್ಯಾರ್ಥಿ ಆತ್ಮಹತ್ಯೆ

Spread the love

ಸಾಯ್ತಿದ್ದೀನಿ. ನನ್ನ ಬ್ಯಾನರ್​​ ಹಾಕ್ಸಿ ಫ್ರೆಂಡ್ಸ್​​​’ ಎಂದು ಸ್ನೇಹಿತರ ವಾಟ್ಸಾಪ್ ಗ್ರೂಪ್ ನಲ್ಲಿ ಮೆಸ್ಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ. ಕಿಶೋರ್ ಕುಮಾರ್ (17) ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಿಶೋರ್ ಕುಮಾರ್, ನಿನ್ನೆ ಸಂಜೆ 4 ಗಂಟೆ ವೇಳೆಯಲ್ಲಿ ಸ್ನೇಹಿತರ ವಾಟ್ಸಾಪ್ ಗ್ರೂಪ್ ಗೆ ಮೆಸ್ಸೇಜ್ ಕಳುಹಿಸಿದ್ದಾನೆ. ‘

ಮಿಸ್​​ ಯೂ ಫ್ರೆಂಡ್ಸ್​​​.. ನಾನು ಹೋಗ್ತಿದ್ದೀನಿ.. ನನ್ನದು ಬ್ಯಾನರ್​ ಹಾಕಿ’ ಎಂದು ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ಆತ್ಮಹತ್ಯೆಗೂ ಮುನ್ನ ಕೆರೆಯ ಫೋಟೋವನ್ನು ಗ್ರೂಪ್​ಗೆ ಶೇರ್​ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಗ್ಗೆ ಕಿಶೋರ್ ಕುಮಾರ್ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದಾರೆ. ಇತ್ತ ಮಗನ ಅತ್ಮಹತ್ಯೆಗೆ ಕಾಲೇಜಿನ ಪ್ರಾಂಶುಪಾಲರು ಬೈದದ್ದೇ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ

ಈ, ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!