December 22, 2024

Newsnap Kannada

The World at your finger tips!

binny

ಕ್ರಿಕೆಟ್‌ಗೆ ಸ್ಟುವರ್ಟ್ ಬಿನ್ನಿ ವಿದಾಯ

Spread the love

ಟೆಸ್ಟ್ ಆಟಗಾರ, ಕರ್ನಾಟಕದ ಅಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ವಿದಾಯ ಘೋಷಿಸಿದ್ದಾರೆ.

ಮೊದಲ ಆಂಗ್ಲೊ ಇಂಡಿಯನ್ ಆಟಗಾರ, ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿಯವರ ಪುತ್ರ 37 ವರ್ಷದ ಸುವರ್ಟ್ ಬಿನ್ನಿ ಪ್ರಥಮ ದರ್ಜೆ ಕ್ರಿಕೆಟ್‌ಗೂ ಗುಡ್‌ಬೈ ಹೇಳಿದ್ದಾರೆ.

ತಮ್ಮ ಕ್ರಿಕೆಟ್ ಜೀವನದ ಪಯಣ ಅಭೂತಪೂರ್ವವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

2014 ರಲ್ಲಿ ಭಾರತ ತಂಡ ಪ್ರವೇಶಿಸಿದ ಸ್ಟುವರ್ಟ್ ಬಿನ್ನಿ, ಆರು ಟೆಸ್ಟ್ ಪಂದ್ಯ, 14 ಏಕದಿನ ಅಂತಾರಾಷ್ಟ್ರೀಯ ಪಂದ್ಯ, ಮೂರು ಟಿ20, 150 ಐಪಿಎಲ್ ಪಂದ್ಯ ಮತ್ತು 100 ಹೆಚ್ಚು ದೇಶಿ ಕ್ರಿಕೆಟ್ ಟೂನಿಗಳನ್ನು ಆಡಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡದಲ್ಲೂ ಆಡಿದ್ದರು.

Copyright © All rights reserved Newsnap | Newsever by AF themes.
error: Content is protected !!