ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಕಲ್ಲು ತೂರಾಟ – ಬಸ್‍ಗಳ ಸಂಚಾರ ಸ್ಥಗಿತ

Team Newsnap
1 Min Read
Stone pelting at Karnataka bus in Maharashtra - bus traffic halted ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಕಲ್ಲು ತೂರಾಟ – ಬಸ್‍ಗಳ ಸಂಚಾರ ಸ್ಥಗಿತ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗಳಿಗೆ ಕಲ್ಲು ತೂರಾಟ ನಡೆಸಿ ಎಂಇಎಸ್ ಪುಂಡರು ಉದ್ಧಟತನ ಪ್ರದರ್ಶನ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮಿರಜ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕದ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.ನಾನು ಮದುವೆ ಆಗಬೇಕು : ಹುಡುಗಿ ಹುಡುಕಿ ಕೊಡಿ – ಶಿವಮೊಗ್ಗ ಜಿಲ್ಲೆ S P ಗೆ ಪತ್ರ ಬರೆದ ರೈತ ಯುವಕ

ಮಹಾರಾಷ್ಟ್ರದ ಮಿರಜ್ ಕಾಗವಾಡ ಮಧ್ಯೆ ಕರ್ನಾಟಕ ಬಸ್‍ಗೆ ಮಹಾರಾಷ್ಟ್ರದ ಪುಂಡರು ನಿನ್ನೆ ಮಧ್ಯರಾತ್ರಿ ಪುಣೆಯಿಂದ ಅಥಣಿಗೆ ಬರುತ್ತಿದ್ದ ಕರ್ನಾಟಕದ ಬಸ್ ಮೇಲೆ ಕಲ್ಲು ತೂರಿದ್ದಾರೆ. ಬಸ್‍ಗೆ ಕಲ್ಲು ತೂರಿದ ಪರಿಣಾಮ ಅಥಣಿ ಡಿಪೋಗೆ ಸೇರಿದ್ದ ಬಸ್‍ನ ಮುಂದಿನ ಗಾಜು ಜಖಂ ಆಗಿದೆ.

ಈಗ ಕರ್ನಾಟಕದ ಬಸ್‍ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದ ಮಿರಜ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕದ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಕಾಗವಾಡ ಗಡಿ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಬಂದ್ ಮಾಡಲಾಗಿದೆ. ನಿನ್ನೆ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದಿದ್ದರು.

Share This Article
Leave a comment