ರಾಜ್ಯ ಸರ್ಕಾರದ ಬರ ಪರಿಹಾರ : ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆ: ಚೆಲುವರಾಯಸ್ವಾಮಿ

Team Newsnap
1 Min Read

ಬೆಂಗಳೂರು : ರಾಜ್ಯ ಸರ್ಕಾರ ನೀಡಿರುವ ಬರ ಪರಿಹಾರ ಇನ್ನೆರಡು ದಿನಗಳಲ್ಲಿ 2 ಸಾವಿರ ಪರಿಹಾರಕ್ಕೆ ಮಾರ್ಗಸೂಚಿ ಪ್ರಕಟ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಶರಣಗೌಡ ಬಯ್ಯಪುರ ಪರಿಹಾರದ ಬಗ್ಗೆ ಪ್ರಶ್ನೆ ಕೇಳಿದರು. ಪರಿಹಾರ ಪಡೆಯಲು ನಿಯಮ ಏನು? ಎಕರೆಗೆ ಪರಿಹಾರವೋ, ಕುಂಟೆಗೆ ಪರಿಹಾರವೋ ಅಂತ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಚೆಲುವರಾಯಸ್ವಾಮಿ, ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸೆಪ್ಟೆಂಬರ್ 22ಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಈವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ 2 ಸಾವಿರ ತಾತ್ಕಾಲಿಕ ಪರಿಹಾರ ರೈತರಿಗೆ ಘೋಷಣೆ ಮಾಡಲಾಗಿದೆ. 2 ಸಾವಿರಕ್ಕೆ ಮಾನದಂಡಗಳೇನು ಅಂತ ಇಂದು ಅಥವಾ ನಾಳೆ ಬಿಡುಗಡೆ ಮಾಡಲಾಗುತ್ತದೆ ಎಂದರು.ಪ್ರಾಣ ಕಳೆದುಕೊಂಡ ಸ್ಥಳದಲ್ಲಿಯೇ ಅರ್ಜುನ ಆನೆಯ ‘ಸ್ಮಾರಕ’ ನಿರ್ಮಾಣ – ಸಿಎಂ ಸಿದ್ಧರಾಮಯ್ಯ

ಎಷ್ಟು ಎಕರೆ, ಯಾರಿಗೆ ಪರಿಹಾರ? ಅನ್ನೋದರ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. 1 ಹೆಕ್ಟೇರ್ ಗೆ 2 ಸಾವಿರ ಪರಿಹಾರ ಕೊಡ್ತೀವಿ. 10 ಗುಂಟೆಗೆ 10 ಗುಂಟೆ ಮಾನದಂಡದಲ್ಲಿ ಪರಿಹಾರ ಕೊಡ್ತೀವಿ. ಪರಿಹಾರಕ್ಕೆ ಮಾನದಂಡ ಬಿಡುಗಡೆ ಮಾಡ್ತೀವಿ ಎಂದು ತಿಳಿಸಿದರು.

Share This Article
Leave a comment