ಮದ್ಯದ ದರ ಅಗ್ಗ ಮಾಡಲು ರಾಜ್ಯ ಸರ್ಕಾರದ ಚಿಂತನೆ ‌: ನೆರೆ ರಾಜ್ಯಗಳ ಮಾರಾಟ ದರ ಅಧ್ಯಯನಕ್ಕೆ 5 ತಂಡ

Team Newsnap
2 Min Read
Council elections: money and bribe

ಪೆಟ್ರೋಲ್ ಡಿಸೇಲ್ ಬೆಲೆ ಅಗ್ಗವಾದರೆ ಸಾಕಾ ? ಇವುಗಳ ಜನರು ಹೆಚ್ಚು ಬಳಕೆ ಮಾಡುವ ಮದ್ಯದ ಬೆಲೆಯನ್ನೂ‌‌ ತಗ್ಗಿಸುವ ಚಿಂತನೆ ನಡೆದಿದೆ

ಇದನ್ನು ಓದಿ –ಡ್ರಗ್ಸ್​​ ಕೇಸ್​ ಪ್ರಕರಣ – ಸಾಕ್ಷ್ಯಾಧಾರ ಕೊರತೆ : ಶಾರೂಖ್ ಪುತ್ರ ಆರ್ಯನ್ ಸೇರಿ 6 ಮಂದಿಗೆ ಕ್ಲೀನ್ ಚಿಟ್

ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಮದ್ಯ ದುಬಾರಿ‌. ಹೀಗಾಗಿ ರಾಜ್ಯದಲ್ಲಿ
ದುಬಾರಿಯಾಗಿರುವ ಮದ್ಯದ ಬೆಲೆ ಇಳಿಸಿ, ಜನರು ಹೆಚ್ಚು ಹೆಚ್ಚು ಮದ್ಯ ಖರೀದಿ ಮಾಡಿ ಆ ಮೂಲಕ ಬೊಕ್ಕಸ ಭರ್ತಿ ಮಾಡುವ ಆಲೋಚನೆ ಸರ್ಕಾರದ್ದಾಗಿದೆ

ಸರ್ಕಾರದ ಈ ನಿರ್ಧಾರ ದಿಂದ ಮದ್ಯ ಮಾರಾಟ ಹೆಚ್ಚಳವಾಗುವ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಆದಾಯದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ

ಹೆಚ್ಚು ಆದಾಯ ನಿರೀಕ್ಷೆ :

2021-22ರಲ್ಲಿ ಮದ್ಯದಿಂದ 24,580 ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ ಗುರಿ ಮೀರಿ 26,276.83 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 29,000 ರೂ. ಆದಾಯ ಸಂಗ್ರಹ ಗುರಿ ನೀಡಿದ್ದಾರೆ.

ಐದು ತಂಡಗಳ ರಚನೆ :

ಕರ್ನಾಟಕದಲ್ಲಿ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮಹಾರಾಷ್ಟ್ರ, ತೆಲಂಗಾಣ, ಕೇರಳ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ದುಬಾರಿ ಮದ್ಯದ ಬೆಲೆಗಳು ಮತ್ತು ಅಬಕಾರಿ ಸುಂಕದ ಸ್ಲ್ಯಾಬ್‍ಗಳನ್ನು ಅಧ್ಯಯನ ಮಾಡಲಿವೆ.

ಜೂನ್ ಮೊದಲ ವಾರದಲ್ಲಿ ವಿಧಾನಪರಿಷತ್ ಸದಸ್ಯರ ಚುನಾವಣೆ ನಂತರ ಈ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ದಿನಕ್ಕೆ 75‌ ಕೋಟಿ ರು ಆದಾಯ :

ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಮದ್ಯದಿಂದ ದಿನಕ್ಕೆ ಸರಾಸರಿ 75 ಕೋಟಿ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ.

ಕರ್ನಾಟಕವು ಮದ್ಯದ ಬಳಕೆಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ಅಬಕಾರಿ ಸುಂಕ ದೇಶದಲ್ಲಿಯೇ ಅತಿ ಹೆಚ್ಚು ವಿಧಿಸುತ್ತಿರುವುದರಿಂದ ಆದಾಯ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a comment