December 22, 2024

Newsnap Kannada

The World at your finger tips!

Karnataka , budget , election

State budget presentation tomorrow: strategy to attract votes - what are the expectations, challenges? ನಾಳೆ ರಾಜ್ಯ ಬಜೆಟ್ ಮಂಡನೆ : ಮತ ಸೆಳೆಯುವ ತಂತ್ರ -ನಿರೀಕ್ಷೆ, ಸವಾಲುಗಳೇನು ?

ನಾಳೆ ರಾಜ್ಯ ಬಜೆಟ್ ಮಂಡನೆ : ಮತ ಸೆಳೆಯುವ ತಂತ್ರ – ನಿರೀಕ್ಷೆ, ಸವಾಲುಗಳೇನು ?

Spread the love

ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಲಿರುವ ಬಜೆಟ್ ಎಲೆಕ್ಷನ್ ಬಜೆಟ್ ಆಗುವ ಸಾಧ್ಯತೆ ಇದೆ . ಕಾಂಗ್ರೆಸ್ ಪ್ರಣಾಳಿಕೆಗೆ ಪ್ರತ್ಯುತ್ತರ ಕೊಡುವ ಜನಪ್ರಿಯ ಯೋಜನೆಗಳನ್ನೊಳಗೊಂಡ ಬಜೆಟ್ ನೀಡುವ ನಿರೀಕ್ಷೆ ಇದೆ.

ಎಲೆಕ್ಷನ್ ಹಾಗೂ ಪಕ್ಷಕ್ಕೂ ಬೂಸ್ಟ್ ಎಂಬ ಸೂತ್ರದ ಛಾಯೆ ನಾಳೆಯ ಬಜೆಟ್ ಮೇಲೆ ಬೀಳುವ ಸಾಧ್ಯತೆಯಿದೆ.

ಶುಕ್ರವಾರ ಬೆಳಗ್ಗೆ 10:30ಕ್ಕೆ ವಿಧಾನ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ 2ನೇ ಬಜೆಟ್ ಮಂಡಿಸಲಿದ್ದಾರೆ.ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ – ಶೇ 13 ರಷ್ಟು ಮತದಾನ

ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ ಎನ್ನಲಾಗಿದೆ ಹೀಗಾಗಿ , ಬಜೆಟ್ ಗಾತ್ರ ಸುಮಾರು 3 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ ಇದೆ.

2023-24ನೇ ಸಾಲಿನ ರಾಜ್ಯ ಬಜೆಟ್ ನಿರೀಕ್ಷೆಗಳೂ ಹಾಗೂ ಸವಾಲುಗಳೂ ಹೆಚ್ಚು. ಇದೊಂದು ಪಕ್ಕಾ ಚುನಾವಣಾ ಲೆಕ್ಕಾಚಾರಗಳೊಂದಿಗೆ ಆಯವ್ಯಯ ಮಂಡನೆ ಆಗಲಿದೆ ಎನ್ನಬಹುದು

ಉಚಿತ ಘೋಷಣೆಗಳನ್ನೂ ಒಳಗೊಂಡ ಜನತೆಗೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆಗೆ ಪ್ಲಾನ್ ಮಾಡಿದೆ
ಕಾಂಗ್ರೆಸ್‌ಗೆ ಏಟು ಕೊಡಲು ಜನಪ್ರಿಯ ಉಚಿತ ಸ್ಕೀಮ್‌ಗಳೂ ಹೆಚ್ಚಿರುವ ಸಾಧ್ಯತೆ ಇದೆ.

ರೈತರು, ಕಾರ್ಮಿಕರು, ಮಹಿಳೆಯರು, ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿ ವರ್ಗಗಳ ಕಲ್ಯಾಣಕ್ಕೆ ಒತ್ತು ಕೊಡುವ ಸಾಧ್ಯತೆ ಇದೆ.

ಬೊಮ್ಮಾಯಿ ಬಜೆಟ್ ನಿರೀಕ್ಷೆಗಳೇನು?

  • ಕಾಂಗ್ರೆಸ್‌ನ ಗೃಹ ಲಕ್ಷ್ಮಿ ಯೋಜನೆಗೆ ಸೆಡ್ಡು ಹೊಡೆಯಲು ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
  • ಪ್ರತಿ ಕುಟುಂಬದ ಗೃಹಿಣಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
  • ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ 3 ಲಕ್ಷದದಿಂದ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ.
  • ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಗಳ ಮೂಲಕ ಸಾಲ ಯೋಜನೆ ಜಾರಿ ಸಾಧ್ಯತೆ.
  • ರಾಜ್ಯದೆಲ್ಲೆಡೆ ನಮ್ಮ ಕ್ಲಿನಿಕ್‌ಗಳ ಹೆಚ್ಚಳ, ಹೋಬಳಿ ಮಟ್ಟದ ತನಕ ನಮ್ಮ ಕ್ಲಿನಿಕ್.
  • ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ.
  • ವಿವಿಧ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ ಸಾಧ್ಯತೆ.
  • ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಹಣ ಮೀಸಲಿಡುವ ಘೋಷಣೆ ಸಾಧ್ಯತೆ.
  • ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಯೋಜನೆ ಘೋಷಣೆ ಸಾಧ್ಯತೆ.
  • ಕುಲ ಕಸುಬು ಆಧಾರಿತ ಸಮುದಾಯಗಳಿಗೆ ಸಹಾಯಧನ ಸಾಧ್ಯತೆ.
  • ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನ ಘೋಷಣೆ ಸಾಧ್ಯತೆ.
  • ಸಾಲ ಮನ್ನಾದಂತಹ ಬಜೆಟ್ ಘೋಷಣೆಗೆ ಕೈ ಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
  • ಕೆಲ ಅಭಿವೃದ್ಧಿ ನಿಗಮಗಳಲ್ಲಿ ಪಡೆದಿರುವ ಸಾಲಮನ್ನಾಗೆ ಬೇಡಿಕೆ ಪ್ರಸ್ತಾಪ ಇದೆ. ಆದರೆ ಕೆಲ ಸಬ್ಸಿಡಿ ಇಳಿಕೆ ವಿಚಾರದಲ್ಲಿ ಕ್ರಮಗಳನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರದ ನಿಲುವು, ಸಾಲಮನ್ನಾ ಯೋಜನೆಗಿಂತ ಸುಧಾರಣಾ ಕ್ರಮಗಳತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಒಲವು ವ್ಯಕ್ತಪಡಿಸಿರುವ ಕಾರಣದಿಂದಾಗಿ ಸಾಲಮನ್ನಾ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬೊಮ್ಮಾಯಿ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
Copyright © All rights reserved Newsnap | Newsever by AF themes.
error: Content is protected !!