ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ – ಶೇ 13 ರಷ್ಟು ಮತದಾನ

Team Newsnap
1 Min Read
Election to Tripura Legislative Assembly today - 13 percent voting ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ - ಶೇ 13 ರಷ್ಟು ಮತದಾನ

ತ್ರಿಪುರ ವಿಧಾನಸಭೆಯ 60 ಸ್ಥಾನಗಳಿಗೆ ಇಂದು (ಗುರುವಾರ) ನಡೆಯುತ್ತಿರುವ ಚುನಾವಣೆಗೆ ಮತದಾನ ಆರಂಭವಾಗಿದೆ.

ಈ ಚುನಾವಣೆ ಹಿನ್ನೆಲೆ 3,328 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಈ ಪೈಕಿ 1,100 ಸೂಕ್ಷ್ಮ ಮತ್ತು 28 ನಿರ್ಣಾಯಕ ಮತಗಟ್ಟೆಗಳಿದೆ.ಚೆಕ್ ಬೌನ್ಸ್ ಪ್ರಕರಣ-ವೈಎಸ್‌ವಿ ದತ್ತಾ ಬಂಧನಕ್ಕೆ ವಾರೆಂಟ್

ತ್ರಿಪುರದಲ್ಲಿ 28.13 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶವಿದೆ. ಇದುವರೆಗೂ ಶೇ.13 ರಷ್ಟು ಮತದಾನವಾಗಿದೆ.

ಚುನಾವಣಾ ಕಣದಲ್ಲಿ 259 ಅಭ್ಯರ್ಥಿಗಳಿದ್ದಾರೆ ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ 55 ಸ್ಥಾನಗಳಲ್ಲಿ ಬಿಜೆಪಿ (BJP) ಸ್ಪರ್ಧಿಸಿದೆ ತನ್ನ ಮಿತ್ರ ಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ಪಕ್ಷಕ್ಕೆ ಐದು ಸ್ಥಾನಗಳನ್ನು ಬಿಟ್ಟು ಕೊಟ್ಟಿದೆ.

ಕಾಂಗ್ರೆಸ್ ಎಡ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿವೆ ಸಿಪಿಐ(ಐ) 47ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು ಕಾಂಗ್ರೆಸ್ 13 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ತಿಪ್ರಾ ಮೋಥಾ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ತ್ರಿಪುರಾದ 60 ಕ್ಷೇತ್ರಗಳ ಪೈಕಿ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಸುಮಾರು 20 ಬುಡಕಟ್ಟು ಪ್ರಾಬಲ್ಯದ ಸ್ಥಾನಗಳಲ್ಲಿ ಇದು ಪ್ರಾಬಲ್ಯ ಹೊಂದಿದೆ. ಟಿಎಂಸಿ
28 ಸ್ಥಾನಗಳಲ್ಲಿ ಸ್ಪರ್ಧಿಸಿದ್ರೆ 58 ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇರಲಿದ್ದು ಎಡ ಪಕ್ಷಗಳ ಕಾಂಗ್ರೆಸ್ ಮೈತ್ರಿ ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಹೊಸ ಪಕ್ಷವಾದ ತಿಪ್ರಾ ಮೋಥಾ ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. 2018 ರಲ್ಲಿ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು, ಅದರಲ್ಲಿ ಅರ್ಧದಷ್ಟು ಬುಡಕಟ್ಟು ಪ್ರದೇಶಗಳಿಂದ ಗೆದ್ದಿತ್ತು.

Share This Article
Leave a comment