ಕೇಂದ್ರ ಹಾಗೂ ಕರ್ನಾಟಕ ಸರ್ಕಾರವು ಅಂಗೀಕಾರ ಮಾಡಿರುವ ಕೃಷಿ ಮತ್ತು ಕಾರ್ಮಿಕ ಮಸೂದೆಗಳು ರೈತ ವಿರೋಧಿಯಾಗಿವೆ ಎಂದು ವಿರೋಧಿಸಿ ಅನೇಕ ರೈತಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ನಾಳೆ (ಸೆಪ್ಟೆಂಬರ್ 28) ಕರ್ನಾಟಕ ರಾಜ್ಯಾದ್ಯಂತ ಬಂದ್ ಹಮ್ಮಿಕೊಂಡಿವೆ.
ನಿನ್ನೆ ರೈತ ಸಂಘಟನೆಗಳು ಬೆಂಗಳೂರಿನ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳನ್ನು ತಡೆದು ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದವು. ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ನವರು ರೈತ ಸಂಘಟನೆಗಳ ಮುಖಂಡರಿಗೆ ವಿಷಯದ ಕುರಿತು ಚರ್ಚಿಸಲು ಬರುವಂತೆ ಆಹ್ವಾನ ನೀಡಿದ್ದರು.
ಮುಖ್ಯಮಂತ್ರಿಗಳೊಡನೆ ರೈತ ಮುಖಂಡರ ಚರ್ಚೆ ವಿಫಲವಾದ ಹಿನ್ನೆಲೆಯಲ್ಲಿ ನಾಳೆ ಬಂದ್ ನಡೆಸುವುದು ಖಚಿತವಾಗಿದೆ. ಮುಖ್ಯಮಂತ್ರಿಗಳು ರೈತರನ್ನು ಮನವೊಲಿಸಲು ಮಾಡಿದ ಪ್ರಯತ್ನ ಕೈ ಕೊಟ್ಟಿದೆ.
ನಾಳೆ ಯಾವ್ಯಾವ ಸೇವೆಗಳು ಲಭ್ಯ
ನಾಳೆ ಹಾಲು, ತರಕಾರಿ, ದಿನಸಿ ಅಂಗಡಿಗಳು, ಆಸ್ಪತ್ರೆ, ಔಷಧಾಲಯ, ಮೊಟ್ರೊ, ವಿಮಾನಯಾನ ಇರಲಿದೆ.
ನಾಳೆ ಯಾವ್ಯಾವ ಸೇವೆಗಳು ಲಭ್ಯವಿಲ್ಲ?
ಆಟೋ-ಟ್ಯಾಕ್ಸಿ ಸೇವೆ ಇರುವದಿಲ್ಲ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸೌಲಭ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು