ಜಸ್ವಂತ್ ಸಿಂಗ್ ವಿಧಿವಶ: ಗಣ್ಯರ ಸಂತಾಪ

Team Newsnap
1 Min Read

ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಭಾನುವಾರ ಬೆಳಿಗ್ಗೆ 6:55 ಕ್ಕೆ ಹೃದಯಸ್ಥಂಭನದಿಂದ ನಿಧನರಾಗಿದ್ದಾರೆ.

ಜಸ್ವಂತ್ ಸಿಂಗ್ ಮೊದಲು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ತರುವಾಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಬಿಜೆಪಿ ಪಕ್ಷ ಸೇರಿದ್ದರು. ಅಟಲ್‌ಜಿ ಸರ್ಕಾರದಲ್ಲಿ ಹಣಕಾಸು ಇಲಾಖೆ, ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ‌ಗಳ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಜಸ್ವಂತ್ ಸಿಂಗ್ ಅವರಿಗೆ 82 ವರ್ಷವಾಗಿತ್ತು. ವಯೋಸಹಜ ಖಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ.

ಜಸ್ವಂತ್ ಸಿಂಗ್ ಅವರು ಬಿಜೆಪಿ ಪಕ್ಷದಿಂದ ಐದು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ( 1980, 1986, 1998, 1999, 2004) ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. (1990, 1991,1996, 2009).

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇನ್ನೂ ಮುಂತಾದ ಗಣ್ಯರು ಜಸ್ವಂತ್ ಸಿಂಗ್‌ರ‌ ನಿಧನಕ್ಕೆ ಸಂತಾಪ‌ ಸೂಚಿಸಿದ್ದಾರೆ.

Share This Article
Leave a comment