ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಭಾರಿ ಪ್ರವಾಹದ ಭೀತಿ

Team Newsnap
1 Min Read

ಕೆ ಅರ್ ಎಸ್ ಜಲನಯನ ಪ್ರದೇಶ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ, ನಿಮಿಷಾಂಭ ದೇಗುಲದ ಬಳಿ ಸ್ನಾನಘಟ್ಟ, ಭಕ್ತರ ಸ್ನಾನ ಗೃಹ ಜಲಾವೃತ‌ಗೊಂಡಿದೆ

ಈ ಹಿನ್ನಲೆ ದೇಗುಲದ ಬಳಿ ನದಿಗೆ ಬ್ಯಾರಿಕೇಡ್ ಹಾಕಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.ಇದನ್ನು ಓದಿ-KSRTC ಎಲೆಕ್ಟ್ರಿಕಲ್ ಬಸ್ ಹೊರ ಜಿಲ್ಲೆಯ ಸಂಚಾರ ಸಿದ್ದತೆ 

ಭಾರಿ ಮಳೆಯ ಪರಿಣಾಮ ಕೆಆರ್‌ಎಸ್ ಜಲಾಶಯ‌ ನೀರಿನ ಮಟ್ಟ ಹೆಚ್ಚಾಗಿದೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಪ್ರವಾಹದಿಂದ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದೆ, ರೈತರ ಜಮೀನಿಗೆ ನೀರು ನುಗ್ಗಿದೆ. ನೀರಿನ‌ ರಭಸಕ್ಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗುವ ಸಂಭವವಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.

Share This Article
Leave a comment