9.20 ಲಕ್ಷ ರು ಗೆ ಮಾರಾಟವಾದ ಶ್ರೀರಂಗಪಟ್ಟಣ ರೈತನ ಎತ್ತು

Team Newsnap
1 Min Read
Srirangapatna farmer's bull sold for Rs 9.20 lakhs 9.20 ಲಕ್ಷ ರು ಗೆ ಮಾರಾಟವಾದ ಶ್ರೀರಂಗಪಟ್ಟಣ ರೈತನ ಎತ್ತು

ಶ್ರೀರಂಗಪಟ್ಟಣ : ಹಳ್ಳಿಕಾರ್ ತಳಿಯ ಒಂಟಿ ಎತ್ತು 9.20 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಶ್ರೀರಂಗಪಟ್ಟಣ ತಾಲೂಕು ಶ್ರೀನಿವಾಸ ಅಗ್ರಹಾರ ಗ್ರಾಮದ ರೈತ ನವೀನ್ ಸಾಕಿದ್ದಾರೆ

ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತನ್ನು ತಮಿಳುನಾಡು ಮೂಲದ ಸರವಣಪಟ್ಟಿ ಗ್ರಾಮದ ಸಿರವೈ ತಂಬಿ 9.20 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ.

ʻಜಾಗ್ವಾರ್‌ʼ ಹೆಸರಿನ ಈ ಎತ್ತು ಹೊರ ರಾಜ್ಯಗಳಲ್ಲೂ ಎತ್ತಿನಗಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.KRS ನಲ್ಲಿ 108 ಅಡಿ ಗಡಿದಾಟಿದ ನೀರು :40 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿ ಭರ್ತಿಗೆ 2 ಅಡಿ ಬಾಕಿ

ತಮಿಳುನಾಡಿನಲ್ಲೂ ಪ್ರಶಸ್ತಿ ಗೆದ್ದು ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ರೇಸ್‌ನಲ್ಲಿ ಕಣಕ್ಕಿಳಿದರೆ ಅಬ್ಬರಿಸುತ್ತಿದ್ದ ಜಾಗ್ವಾರ್‌ ವೇಗಕ್ಕೆ ಮನಸೋತ ತಮಿಳುನಾಡಿನ ವ್ಯಕ್ತಿ 9.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.

WhatsApp Image 2023 07 21 at 9.21.34 PM
Share This Article
Leave a comment