ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ದಿನ ಜ.21 ರಂದು “ದಾಸೋಹ ದಿನ’ವಾಗಿ ಆಚರಣೆ

Team Newsnap
1 Min Read

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ದಿನವಾದ ಜನವರಿ 21 ಅನ್ನು “ದಾಸೋಹ ದಿನ’ವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.


ಶ್ರೀಗಳು ಸಮಾಜ ಸೇವಾ ಕಾರ್ಯಕ್ಷೇತ್ರಗಳಾದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರು ನಿತ್ಯಪೂಜ್ಯರು ಮತ್ತು ಅನುಸರಣೀಯರಾಗಿದ್ದಾರೆ. ಶ್ರೀಗಳ ಅಭೂತಪೂರ್ವ ಸೇವೆ ಸ್ಮರಿಸುವ ಸಲುವಾಗಿ ಜ.21 ರಂದು ಸರ್ಕಾರದ ವತಿಯಿಂದ “ದಾಸೋಹ ದಿನ’ವೆಂದು ಆಚರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

shivakumar srigalu1


ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು “ಕಾಯಕವೇ ಕೈಲಾಸ’ ಎಂಬ ತತ್ವದಡಿ ೧೯ 1930 ರಲ್ಲಿ ಸಿದ್ದಗಂಗಾ ಮಠದ ಜವಾಬ್ದಾರಿ ಹೊತ್ತುಕೊಂಡು ಅಂದಿನಿಂದಲೂ ನಿರಂತರವಾಗಿ ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ- ಧರ್ಮ ಭೇದವಿಲ್ಲದೇ ವಿದ್ಯೆ, ವಸತಿ, ದಾಸೋಹ ನೀಡಿ “ತ್ರಿವಿಧ ದಾಸೋಹಿ’ಗಳಾಗಿದ್ದರು.


1960 ರ ದಶಕದಲ್ಲಿ ದೇಶವೇ ಆಹಾರದ ಕೊರತೆ ಎದುರಿಸುತ್ತಿದ್ದಾಗ ಶ್ರೀಗಳು ಸ್ವತಃ ತಾವೇ ಜೋಳಿಗೆ ಹಿಡಿದು ಜನರಿಂದ ದಾನ ಪಡೆದು ಹಸಿವು ನೀಗಿಸಿದರು ಎಂದು ಪ್ರಕಟಣೆಯಲ್ಲಿ ಶ್ಲಾಘಿಸಲಾಗಿದೆ.


ಶ್ರೀಗಳ ಪರಂಪರೆಯಂತೆ ಇಂದಿಗೂ ಸಾವಿರಾರು ಬಡ ಮಕ್ಕಳಿಗೆ ಹಾಗೂ ಭಕ್ತರಿಗೆ ನಿತ್ಯ ದಾಸೋಹ ಮಾಡಲಾಗುತ್ತಿದೆ. ಶ್ರೀಗಳು ಒಂಬತ್ತು ದಶಕಗಳಿಗೂ ಮೀರಿ ನಿತ್ಯ ದಾಸೋಹಗೈದು ನಾಡಿನ ಇತರೆ ಎಲ್ಲರಿಗೂ ಮಾದರಿಯಾಗಿದ್ದಾರೆ. ದಾಸೋಹ ಶ್ರೇಷ್ಠರಾಗಿದ್ದಾರೆ. ಶ್ರೀಗಳ ಈ ಕೈಂಕರ್ಯ ಪರಿಗಣಿಸಿ 2007 ರಲ್ಲಿ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Share This Article
Leave a comment