ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್: ಹಣ ಅಕ್ರಮ ವರ್ಗಾವಣೆ – ವ್ಯಕ್ತಿಯ ಬಂಧನ

Team Newsnap
1 Min Read
Bengaluru: 114 crores of Guru Raghavendra Bank. Forfeiture of property ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್‌ನ 114 ಕೋಟಿ ರೂ. ಆಸ್ತಿ ಜಪ್ತಿ

1,000 ಕೋಟಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬೆಂಗಳೂರು ಮೂಲದ ಸಹಕಾರಿ ಬ್ಯಾಂಕ್ ವಿರುದ್ಧ ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಜಾರಿ ನಿರ್ದೇಶನಾಲಯ ಗುರುವಾರ ಈ ವಿಷಯ ತಿಳಿಸಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜೇಶ್ ವಿಆರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ರಾಜ್ಯದಲ್ಲಿ ಮತ್ತೆ 7 `IPS’ ಅಧಿಕಾರಿಗಳ ವರ್ಗಾವಣೆ

ಬ್ಯಾಂಕಿನ ಮ್ಯಾನೇಜ್ಮೆಂಟ್ ಸಹಕಾರದಿಂದ ಬ್ಯಾಂಕಿನಿಂದ ಹೊರತೆಗೆಯಲಾದ ನಿಧಿಯ ಪ್ರಮುಖ ಫಲಾನುಭವಿ ‘ಈತ’ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಸಂಸ್ಥೆಯು ಕಳೆದ ವರ್ಷ ಫೆಬ್ರವರಿಯಲ್ಲಿ ಈ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ ರಾಮಕೃಷ್ಣ ಅವರನ್ನು ಬಂಧಿಸಿತ್ತು.

ರಾಜೇಶ್ ವಿಆರ್ ಪಾತ್ರದ ಬಗ್ಗೆ ಮಾತನಾಡಿದ ಇ.ಡಿ, ‘ಆರ್ ಬಿ ಐ ನ ತಪಾಸಣಾ ವರದಿ ಪ್ರಕಾರ, ಆತ ಬ್ಯಾಂಕ್ ನಿಂದ 40.40 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾರೆ ಮತ್ತು ಅದನ್ನು ಮರುಪಾವತಿ ಮಾಡಿಲ್ಲ’ ಎಂದಿದೆ.

ರಾಜೇಶ್ ವಿಆರ್ ಮತ್ತು ಅವರ ಪತ್ನಿ ಇತರ ಸಹಕಾರಿ ಬ್ಯಾಂಕ್ಗಳು/ಸೊಸೈಟಿಗಳಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿದ ಪ್ರಕರಣಗಳಲ್ಲಿ ಅವರ ವಿರುದ್ಧ ಅನೇಕ ಎಫ್ಐಆರ್ಗಳಿವೆ ಎಂಬುದು ತನಿಖೆ ಸಮಯದಲ್ಲಿ ಗಮನಕ್ಕೆ ಬಂದಿದೆ.

ಹಣ ದುರುಪಯೋಗ:

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷನ ಬಂಧಿಸಿದ ಇ.ಡಿ ಫೆಬ್ರುವರಿ 2020 ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ ಗಳ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ.

ಈ ಪ್ರಕರಣದಲ್ಲಿ ಈ ಹಿಂದೆ 45.32 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಸ್ಥೆ ಜಪ್ತಿ ಮಾಡಿತ್ತು.

Share This Article
Leave a comment