ತಾಯಿ ಚಾಮುಂಡೇಶ್ವರಿ ಹುಂಡಿಯಲ್ಲಿ 1 ಕೋಟಿ 33 ಲಕ್ಷ ರು ಸಂಗ್ರಹ

Team Newsnap
1 Min Read

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ತಾಯಿ ಚಾಮುಂಡೇಶ್ವರಿಯ ಹುಂಡಿಯ ಕಾಣಿಕೆಯು 1,33,25,302 ರೂ. ಸಂಗ್ರಹವಾಗಿದೆ.

ಲಾಕ್‌ಡೌನ್‌ ಬಳಿಕ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾಣಿಕೆ ಸಂಗ್ರಹವು ಸುಧಾರಣೆ ಕಂಡಿದೆ.

ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ 60 ಕ್ಕೂ ಹೆಚ್ಚು ಮಂದಿಯಿಂದ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಯಿತು.

ಕೋರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಕಳೆದ ಮಾರ್ಚ್ ತಿಂಗಳಿನಿಂದಲೂ ಲಾಕ್‌ಡೌನ್ ಘೋಷಣೆಯಾಗಿದ್ದ ಹಿನ್ನೆಲೆ ಸುಮಾರು ನಾಲ್ಕೆದು ತಿಂಗಳುಗಳ ಕಾಲ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆ ಸಂದರ್ಭದಲ್ಲಿ ದೇವಾಲಯದಲ್ಲಿನ ಕಾಣಿಕೆ ಹುಂಡಿಯಲ್ಲಿ ಯಾವುದೇ ಸಂಗ್ರಹವಾಗಿರಲಿಲ್ಲ.

ಲಾಕ್‌ಡೌನ್ ಕ್ರಮವನ್ನು ಸರ್ಕಾರವು ಹಂತ ಹಂತಹಂತವಾಗಿ ಸಡಿಲಗೊಳಿಸಿದ್ದರಿಂದ ನಿಧಾನವಾಗಿ ಭಕ್ತಾದಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆ ದೇವಸ್ಥಾನಕ್ಕೆ ಭಕ್ತಾದಿಗಳು ಸಂಖ್ಯೆಯು ಹರಿದು ಬರತೊಡಗಿದ್ದು, ಕಾಣಿಕೆ ಹುಂಡಿಯಲ್ಲಿ ಕಾಣಿಕೆಯೂ ಸಂಗ್ರಹವೂ ಹೆಚ್ಚಾಗುತ್ತದೆ.

Share This Article
Leave a comment