ಐಪಿಎಲ್ 20-20ಯ 56ನೇ (ಕೊನೆಯಲ್ಲಿ ಲೀಗ್ ಪಂದ್ಯ) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ 10 ವಿಕೆಟ್‌ಗಳ ಅದ್ಭುತ ಜಯ ಸಾಧಿಸಿ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಎಮ್‌ಐ ತಂಡದಿಂದ ರೋಹಿತ್ ಶರ್ಮಾ ಹಾಗೂ ಡಿ. ಕಾಕ್ ಆರಂಭಿಕ ಆಟಗಾರರಾಗಿ ಸ್ಕ್ರೀಸ್‌ಗಿಳಿದು ಸಾಧಾರಣ ಆರಂಭಿಸಿದರು. ಶರ್ಮಾ 7 ಎಸೆತಗಳಿಗೆ 4 ರನ್ ಗಳಿಸಿದರೆ, ಕಾಕ್ 13 ಎಸೆತಗಳಿಗೆ 25 ರನ್ ಗಳಿಸಿಸರು. ನಂತರ ಬಂದ ಎಸ್. ಯಾದವ್, ಐ. ಕಿಶನ್ ಹಾಗೂ ಕೇರನ್ ಪೋಲಾರ್ಡ್ ಅವರು ಕ್ರಮವಾಗಿ 36 ರನ್ (29 ಎಸೆತಗಳು), 33 ರನ್ (30 ಎಸೆತಗಳು) ಹಾಗೂ 41 ರನ್ (25 ಎಸೆತಗಳು) ಗಳಿಸಿದರು. ಎಮ್‌ಐ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ನಂತರ ಎಸ್‌ಆರ್‌ಹೆಚ್ ತಂಡದಿಂದ ಮೈದಾನಕ್ಕಿಳಿದ ಡಿ. ವಾರ್ನರ್ ಮತ್ತು ಡಬ್ಲ್ಯೂ. ಸಹಾ ಅವರು ಅತ್ಯಾಕರ್ಷಕ ಪ್ರದರ್ಶನವನ್ನೇ ನೀಡಿದರು. ವಾರ್ನರ್ 58 ಎಸೆತಗಳಿಗೆ 85 ರನ್ ಹಾಗೂ ಸಹಾ 45 ಎಸೆತಗಳಿಗೆ 58 ರನ್ ಗಳಿಸಿದರು. ಎಸ್‌ಆರ್‌ಹೆಚ್ ತಂಡ 17.1 ಓವರ್‌ಗಳಲ್ಲಿ 151 ಒಂದೂ ವಿಕೆಟ್ ನಷ್ಟವಿಲ್ಲದೇ ರನ್ ಗಳಿಸಿ ರೋಚಕ ಜಯ ಸಾಧಿಸಿತು.
More Stories
ಮಂಗೋಟೆ ಶ್ರೀ ಮುರುಗೆಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಉದ್ಯೋಗ ಮೇಳ
ಅನಾರೋಗ್ಯ ದಿಂದ ಬಳಲುತ್ತಿರುವ ನಟಿ ಸಂಜನಾ ಮತ್ತೆ ಆಸ್ಪತ್ರೆಗೆ ದಾಖಲು
ಮದ್ದೂರಿನ ಮಹಿಳೆ ಮೇಲೆ ಅತ್ಯಾಚಾರ , ಕೊಲೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳ ಬಂಧನ