ಐಪಿಎಲ್ 20-20ಯ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 88 ರನ್‌ಗಳ ಅದ್ಭುತ ಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಎಸ್‌ಆರ್‌ಹೆಚ್ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ಡಿ. ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಆಟಕ್ಕೆ ಉತ್ತಮ ಆರಂಭ ನೀಡಿದರು. ವಾರ್ನರ್ 34 ಬಾಲ್‌ಗಳಿಗೆ 66 ರನ್ ಗಳಿಸಿದರೆ, ಸಹಾ 45 ಬಾಲ್‌ಗಳಿಗೆ 87 ರನ್‌ಗಳ ಮಿಂಚಿನಾಟ ಆಡಿದರು. ನಂತರ ಬಂದ ಮನೀಶ್ ಪಾಂಡೆ 31 ಬಾಲ್‌ಗಳಿಗೆ 41 ರನ್ ಗಳಿಸಿ ತಂಡದ ಮೊತ್ತ 200 ರ ಗಡಿ ದಾಟುವಲ್ಲಿ ಸಹಾಯಕವಾದರು. ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು.
ಡಿಸಿ ತಂಡ ನಿಗದಿತ ಗುರಿಯನ್ನು ತಲುಪಲು ವಿಫಲ ಪ್ರಯತ್ನ ಮಾಡಿತು. ಡಿಸಿ ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಅಜಿಂಕ್ಯ ರಹಾನೆ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದರು. ರಹಾನೆ 19 ಬಾಲ್‌ಗಳಲ್ಕಿ 26 ರನ್ ಗಳಿಸಿದರೆ, ಧವನ್ ಶೂನ್ಯಕ್ಕೆ ಔಟಾದರು. ನಂತರ ಮೈದಾನಕ್ಕಿಳಿದ ಆರ್. ಪಂತ್ 35 ಬಾಲ್‌ಗಳಿಗೆ 36 ರನ್ ಗಳಿಸಿದರೂ ಉಳಿದ ಆಟಗಾರರ ಸಮನ್ವಯದ ಕೊರತೆ ಇಂದು ಕಂಡುಬಂದಿತು. ಡಿಸಿ ತಂಡ 19 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಪಂದ್ಯದಲ್ಲಿ ಸೋಲಿನ ರುಚಿ ಕಂಡಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ