ಮದುವೆಗೆ ನಿರಾಕರಣೆ- ಯುವತಿಗೆ ಗುಂಡಿಕ್ಕಿ ಕೊಲೆ

Team Newsnap
1 Min Read

ಕಾಲೇಜ್​ವೊಂದರ ಮುಂದೆ ಹಾಡು ಹಗಲೇ 21 ವರ್ಷದ ಯುವತಿಯನ್ನು ಪಾಯಿಂಟ್​ ಬ್ಲಾಕ್​ ರೇಜ್​ನಲ್ಲಿ  ಗುಂಡು ಹೊಡೆದು ಕೊಂದಿರುವ ಘಟನೆ ಬೆಚ್ಚಿಬೀಳಿಸಿದೆ.

ರಾಜ್ಯದ ರಾಜಧಾನಿಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಫರಿಯಾಬಾದ್ ನ ಬಲ್ಲಬ್ಗರ್ ನಲ್ಲಿ ಈ ಘಟನೆ ನಡೆದಿದೆ.

ಪರೀಕ್ಷೆ ಬರೆದು ಹೊರ ಬಂದಿದ್ದ ಯುವತಿಯನ್ನು ಕಾರಿನಲ್ಲಿ ಅಪಹರಿಸಲು ಮುಂದಾದಾಗ ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಪಾಯಿಂಟ್​ ಬ್ಲಾಕ್​ ರೇಂಜ್​ನಲ್ಲಿ ಗುಂಡು ಹಾರಿಸಿ ಭೀಕರ ಹತ್ಯೆ ಮಾಡಲಾಗಿದೆ.

ಈ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ . ವಿಡಿಯೋ ವೈರಲ್​ ಆಗಿದೆ. ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮಹಿಳಾ ರಾಷ್ಟ್ರೀಯ ಆಯೋಗ ಘಟನೆ ಕುರಿತು ಕ್ರಮ ತೆಗೆದುಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ಪತ್ರ ಬರೆದಿದ್ದಾರೆ. 

ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಟೋಸಿಫ್​ ಎಂದು ಗುರುತಿಸಲಾಗಿದೆ, ಯುವತಿಯ ಹತ್ಯೆಗೆ ರೆಹಾನ್​ ಎಂಬಾಂತ ಕೂಡ ಸಾಥ್​ ನೀಡಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ಯುವತಿ ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಪೊಲೀಸ್​ ಅಧಿಕಾರಿ ಜೈವೀರ್​ ಸಿಂಗ್​ ಕೊನೆಯದಾಗಿ ಮಾತನಾಡಿಸಿದ್ದಾರೆ. ಈ ವೇಳೆ ಆಕೆ ಟೋಸಿಫ್​ ಮೊದಲು ಮಾತನಾಡಲು ಯತ್ನಿಸಿದ ಬಳಿಕ ಗುಂಡು ಹಾರಿಸಿದ ಎಂದು ಹೇಳಿದ್ದಾಳೆ.

ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಯುವತಿ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಿಖಿತಾಳನ್ನು ಈತ ಹಿಂಬಾಲಿಸಿ ಹಿಂಸೆ ನೀಡುತ್ತಿದ್ದ, ದೌರ್ಜನ್ಯದ ಆರೋಪದ ಮೇಲೆ 2018ರಲ್ಲಿ ಈತನ ವಿರುದ್ಧ ನಿಖಿತಾ ಕುಟುಂಬದವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬಳಿಕ ಈತ ಕೊಲೆ ಮಾಡುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈ ದೂರನ್ನು ಹಿಂಪಡೆಯಲಾಗಿತ್ತು ಎಂದಿದ್ದಾರೆ.

Share This Article
Leave a comment