October 4, 2024

Newsnap Kannada

The World at your finger tips!

fire , accident , house

Sravanabelagola MLA Balakrishna Kobbari house on fire: no danger ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಕೊಬ್ಬರಿ ಮನೆಯಲ್ಲಿ ಬೆಂಕಿ ಅನಾಹುತ : ಅಪಾಯವಿಲ್ಲ

ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಕೊಬ್ಬರಿ ಮನೆಯಲ್ಲಿ ಬೆಂಕಿ ಅನಾಹುತ : ಅಪಾಯವಿಲ್ಲ

Spread the love

ಶ್ರವಣಬೆಳಗೋಳದ ಶಾಸಕ ಬಾಲಕೃಷ್ಣರ ಕೊಬ್ಬರಿ ತುಂಬಿದ್ದ ಮನೆಗೆ ಬೆಂಕಿ ಬಿದ್ದು ಕಾರು ಸೇರಿದಂತೆ ಲಕ್ಷಾಂತರ ರು ಮೌಲ್ಯದ ವಸ್ತುಗಳು ಆಹುತಿಯಾದ ಘಟನೆ ಚನ್ನರಾಯಪಟ್ಟಣದ ಚೋಳೇನಹಳ್ಳಿಯಲ್ಲಿ ನಡೆದದೆ.

ಚನ್ನರಾಯಪಟ್ಟಣದ ಚೋಳೇನಹಳ್ಳಿಯಲ್ಲಿರುವ ಶಾಸಕ ಬಾಲಕೃಷ್ಣರವರ ಮನೆಯ ಕೂಗಳತೆ ದೂರಲ್ಲಿರುವ ಕೊಬ್ಬರಿ ತುಂಬಿದ್ದ ಮನೆಯಲ್ಲಿ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿದೆ.ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ಧ್ಯಾನ: ಸಚಿವ ನಾಗೇಶ್ ಪತ್ರ

ಬೆಂಕಿಯ ಕೆನ್ನಾಲಿಗೆಗೆ ಮನೆಯು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!