ಮೈ- ಬೆಂಗಳೂರು ಹೈವೇಯಲ್ಲಿ ಸ್ಪೀಡ್ ಲಿಮಿಟ್ 100 ಕಿ.ಮೀ – ಮೀರಿದರೆ ದಂಡ

Team Newsnap
1 Min Read

*ಎಡಿಜಿಪಿ ಅಲೋಕ್ ಕುಮಾರ್ ಆದೇಶ

ಬೆಂಗಳೂರು :
ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಗರಿಷ್ಠ ವೇಗ ಮಿತಿ 100 ಕಿಮೀ ನಿಗದಿ ಮಾಡಲಾಗಿದೆ . ಈ ನಿಯಮ ಮೀರುವ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಎಕ್ಸ್‌ಪ್ರೆಸ್‌ವೇನಲ್ಲಿ ವೇಗದ ಮಿತಿಯನ್ನು ಅಳವಡಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಸ್ಪೀಡ್ ಲಿಮಿಟ್ 100 ಕಿಮೀಗೆ ಸೀಮಿತಗೊಳಿಸಿ, ಅಲೋಕ್ ಕುಮಾರ್ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಂಡ ಬಳಿಕ ನೂರಾರು ಅಪಘಾತಗಳಿಂದ ಸಾಕಷ್ಟು ಸಾವುನೋವುಗಳು ಸಂಭವಿಸಿವೆ.

ರಸ್ತೆ ಪರಿಶೀಲನೆ ನಡೆಸಿದ್ದ ಎಡಿಜಿಪಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೈಗೊಳ್ಳಬಹುದಾದ ಕ್ರಮಗಳನ್ನು ಪಟ್ಟಿ ಮಾಡಿದ್ದರು.

ಇದೀಗ ರಸ್ತೆಯಲ್ಲಿ ವೇಗ ಮಿತಿಯ ಬೋರ್ಡ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ರಾಮನಗರ ಜಿಲ್ಲೆಯಲ್ಲಿ ಸ್ಪೀಡ್ ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವೇಗ ಮಿತಿ ದಾಟಿದರೆ 1000 ರೂ. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೊ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ.

Share This Article
Leave a comment