November 5, 2024

Newsnap Kannada

The World at your finger tips!

siddu budget

ರಾಜ್ಯ ಬಜೆಟ್ ನಲ್ಲಿ ಕೃಷಿಗೆ ವಿಶೇಷ ಆಧ್ಯತೆ – ಕೃಷಿ ಸಚಿವರ ಹರ್ಷ

Spread the love

ಬೆಂಗಳೂರು : ಕೃಷಿಕ ಹಾಗೂ ರೈತ ಮಹಿಳೆಯರ ಆರ್ಥಿಕ ಮತ್ತ ತಾಂತ್ರಿಕ ಸಬಲೀಕರಣಕ್ಕೆ ವಿಶೇಷ ಯೋಜನೆಗಳ ‌ಜಾರಿ.

  • ಕೃಷಿ,ತೋಟಗಾರಿಕೆಯಾಗಿಕೆ , ಪಶುಸಂಗೋಪನೆ, ರೇಷ್ಮೆ , ಮೀನುಗಾರಿಕೆಗಳ ಸಂಯೋಜಿತ ಚಟುಚಟಿಕೆಗಳಿಗೆ ಉತ್ತೇಜನ
  • ಸುಸ್ಥಿರ ಕೃಷಿ ಅಭಿವೃದ್ಧಿಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ..
  • ಸಮಗ್ರ ಕೃಷಿಗೆ ಉತ್ತೇಜನ.
    ಹೊಸ ಕೃಷಿ ಪದ್ದತಿ ಹಾಗೂ ತಂತ್ರಜ್ಞಾನಗಳ ರೈತರಿಗೆ ಅರಿವು ಮೂಡಿಸಲು ಕ್ರಮ..
  • ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಮೌಲ್ಯವರ್ಧನೆ ಕುರಿತು ಅರಿವು ಕಾರ್ಯಕ್ರಮಗಳು..
  • ರೈತರ ಬೆಳೆಗೆ ಉತ್ತಮ ಬೆಳೆ ಕಲ್ಪಿಸಲು ಮಾರುಕಟ್ಟೆ ಸಂಪರ್ಕ..
  • ಕೃಷಿ ಮತ್ತು ಪೂರಕ ಚಟುವಟಿಕಡಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗು ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿ ಪರಿಣಾಮಕಾರಿ ಅನುಷ್ಠಾನ..
  • ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಪ್ತು ಉತ್ತೇಜನಕ್ಕೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮ ನಿಯಮಿತ( ಕೆಫೆಕ್) ಸಂಸ್ಥೆ ಬಲಪಡಿಸಲು 80 ಕೋಟಿ ರೂ ಒದಗಿಸಲಾಗುವುದು
  • ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಗಳ ಸ್ಥಾಪನೆ..
  • ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೊಗಾನೆ, ವಿಜಯಪುರದ ಹಿಟ್ಟಿಂಗಿಆಳ ಹಾಗು ಬೆಂಗಳೂರು ಬಳಿಯ ಪೂಜೆನಹಳ್ಳಿಯಲ್ಲಿ ಸ್ಥಾಪನೆ..
  • ನಶಿಸಿ ಹೋಗುತ್ತಿರುವ ಸ್ಥಳಿಯ ಬೆಳೆಗಳ ತಳಿಗಳ ಸಂಗ್ರಹಣೆಗೆ ಸಮೂದಾಯ ಬೀಜ ಬ್ಯಾಂಕ್
  • ನಮ್ಮ ಮಿಲೇಟ್ ಎಂಬ ಹೊಸ ಯೋಜನೆ ಪ್ರಾರಂಭ.. ಸಿರಿಧಾನ್ಯ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ಕ್ರಮ
  • ರಾಜ್ಯದ ಬರಪೀಡಿತ ಮತ್ತು ಮಳೆಯಾಶ್ರೀತ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಗಾಗಿ ಪ್ರತಿ ವರ್ಷ ಸಾವಿರದಂತೆ ಒಟ್ಟು 5 ಸಾವಿರ ಸಣ್ಣ ಸರೋವರ ನಿರ್ಮಾಣಕ್ಕೆ ಕ್ರಮ
  • ಬೆಂಗಳೂರಿನ ಕೃಷಿ ಇಲಾಖೆಯ RK ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂದಿಸಿದ ತಾಂತ್ರಿಕತೆಗಳನ್ನು ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು
  • ರೈತರಿಗೆ ಕೀಟ, ರೋಗ ಮತ್ತು ಪೊಷಕಾಂಶ ನಿರ್ವಹಣೆಯ ಸಲಹೆ ನೀಡಲು ರಾಯಚೂರು ಕೃಷಿ ವಿವಿ ಅಭಿವೃದ್ಧಿ ಪಡಿಸಿರುವ e sap ತಂತ್ರಾಂಶದ ಸೌಲಭ್ಯಗಳನ್ನು ಎಲ್ಲಾ ರೈತರಿಗೂ ಪರಿಚಯಿಸಲು ಕ್ರಮ
  • ಕೃಷಿ ಇಲಾಖೆ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಾಯ ರಚನೆ..
    ಇದರ ಮೂಲಕ ವಿವಿಧ ಇಲಾಖೆಗಳ ಅಡಿಯಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು..
  • ಕೃಷಿಯಲ್ಲಿ ಉಪಗ್ರಹ ಚಿತ್ರ, ಸೆನ್ಸಾರ್ ಗಳ ಬಳಕೆ ಮತ್ತು ಮಿಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಆಧಾರಿಸಿ ಉತ್ಪಾದಕತೆ ಮುನ್ಸೂಚನೆಯನ್ನು ಮಾಡಲು ದತ್ತಾಂಶ ವನ್ನು ಅಭಿವೃದ್ಧಿ ಪಡಿಸಲಾಗುವುದು..
  • ರೈತ ಉತ್ಪನ್ನ ಸಂಸ್ಥೆಗಳನ್ನು (FPO) ಇನ್ನಷ್ಟು ಸದೃಢ ಮತ್ತು ಸುಸ್ಥಿರಗೊಳಿಸಲು ಕೃಷಿ ವಲಯದ startup ಗಳನ್ನು ಉತ್ತೇಜಿಸಲು ಕ್ರಮ.
  • ಮಂಡ್ಯ ಜಿಲ್ಲೆಯ ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಕುರಿತು ಪರಿಶೀಲಿಸಲು ಸಮಿತಿ ರಚನೆ
Copyright © All rights reserved Newsnap | Newsever by AF themes.
error: Content is protected !!