ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ: ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಅಶ್ವಿನಿ

Team Newsnap
1 Min Read
Special pooja by family members at Appu's grave ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ: ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಅಶ್ವಿನಿ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವೇ ಕಳೆದಿದೆ. ಇಂದು ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಆಗಮಿಸಿದ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಚಾಕುವಿನಿಂದ ಚುಚ್ಚಿ ಸುಲಿಗೆ : ಇಬ್ಬರ ಬಂಧನ

ಬೆಂಗಳೂರಿನ ಕಂಠೀವರ ಸ್ಟುಡಿಯೋ ಬಳಿಯಿರುವ ಅಪ್ಪು ಸಮಾಧಿ ಬಳಿ ಆಗಮಿಸಿದ ರಾಘವೇಂದ್ರ ರಾಜ್‌ ಕುಮಾರ್‌, ಶಿವರಾಜ್‌ ಕುಮಾರ್‌, ಅಶ್ವಿನಿ , ಗೀತಾ, ಪುನೀತ್‌ ಸಹೋದರಿಯರು ಪುನೀತ್‌ ಪುತ್ರಿ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿದ್ದರು.ಈ ವೇಳೆ ಪುನೀತ್‌ ರಾಜ್‌ ಕುಮಾರ್‌ ಪತ್ನಿ ಅಶ್ವಿನಿ ಪತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಕುಟುಂಬಸ್ಥರು ಸಹ ಅಪ್ಪು ನೆನದು ಭಾವುಕರಾಗಿದ್ದಾರೆ. ಇನ್ನು ಅಪ್ಪು ನೋಡಲು ಸಮಾಧಿ ಬಳಿ ಅಭಿಮಾನಿಗಳ ದಂಡು ಹರಿದು ಬಂದಿದೆ.

Share This Article
Leave a comment