ಗುರು ಪೂರ್ಣಿಮಾ (ಹುಣ್ಣಿಮೆಯ) ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾದರೆ, ರಾಶಿಗಳಿಗೆ ಅನುಗುಣವಾಗಿ ಗುರು ಪೂರ್ಣಿಮೆಯ ದಿನ ವಿಶೇಷ ದಾನಗಳನ್ನು ಮಾಡಿ ನೀವು ನಿಮ್ಮ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
- ಮೇಷ – ಆಷಾಢ ಹುಣ್ಣಿಮೆಯಂದು ನಿರ್ಗತಿಕರಿಗೆ ಬೆಲ್ಲ, ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.
- ವೃಷಭ – ಕಲ್ಲು ಸಕ್ಕರೆ ದಾನ ಮಾಡಿ, ಪೂಜೆಯ ಕೊಠಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.
- ಮಿಥುನ – ಹಸುವಿಗೆ ಹಸಿರು ಮೇವು ಹಾಕಿದರೆ ನಿಮಗೆ ಶುಭಫಲಗಳು ಪ್ರಾಪ್ತಿಯಾಗಲಿವೆ. ನೀವು ಹಸಿರು ಬಣ್ಣದ ಹೆಸರು ಬೆಳೆಯನ್ನು ಸಹ ದಾನ ಮಾಡಬಹುದು.
- ಕರ್ಕ – ಬಡವರಿಗೆ ಅನ್ನವನ್ನು ದಾನ ಮಾಡುವುದು ಉತ್ತಮ. ಒತ್ತಡವನ್ನು ತೊಡೆದುಹಾಕಲು ಈ ಪರಿಹಾರ ಮಂಗಳಕರ.
- ಸಿಂಹ – ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ.
- ಕನ್ಯಾ – ಆಹಾರ ಅಥವಾ ದಕ್ಷಿಣೆಯನ್ನು ನೀಡಬೇಕು. ಹಸುವಿಗೆ ಮೇವು ತಿನ್ನಿಸಿ.
- ತುಲಾ – ಚಿಕ್ಕ ಮಕ್ಕಳಿಗೆ ಪಾಯಸ ದಾನ ಮಾಡಬೇಕು. ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
- ವೃಶ್ಚಿಕ – ಮಂಗಗಳಿಗೆ ಬೇಳೆ ಮತ್ತು ಬೆಲ್ಲವನ್ನು ತಿನ್ನಿಸಬೇಕು. ಬಡ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಕರ.
- ಧನು– ದೇವಸ್ಥಾನದಲ್ಲಿ ಕಡಲೆ ಬೆಳೆ ದಾನ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
- ಮಕರ – ಹುಣ್ಣಿಮೆಯಂದು ಬಡವರಿಗೆ ಕಂಬಳಿಗಳನ್ನು ಹಂಚುವುದು ಮಂಗಳಕರ. ಹೀಗೆ ಮಾಡುವುದರಿಂದ ಉದ್ಯೋಗದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
- ಕುಂಭ – ವೃದ್ಧಾಶ್ರಮಕ್ಕೆ ಬಟ್ಟೆ, ಆಹಾರ ಮತ್ತು ಹಣವನ್ನು ದಾನ ಮಾಡಿ.
- ಮೀನ – ಬಡವರಿಗೆ ಅರಿಶಿನ ಮತ್ತು ಬೇಳೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳನ್ನು ದಾನ ಮಾಡಿ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)