ಯಾರೋ ನೀನು?
ಚಂದಿರನಷ್ಟು ಅಂದವಿಲ್ಲದಿದ್ದರೂ,
ಕಮಲದಂತೆ ಸುಕೋಮಲೆಯಾಗಿರದಿದ್ದರೂ,
ಸರಸ್ವತಿಯಂತೆ ವಿದ್ಯಾವಂತೆಯಲ್ಲದಿದ್ದರೂ,
ಧನಲಕ್ಷ್ಮಿಯಂತೆ ಹಣವಿಲ್ಲದಿದ್ದರೂ,
ಮಾತೆ ಪಾರ್ವತಿಯಸ್ಟು ಧೈರ್ಯವಿಲ್ಲದಿದ್ದರೂ,
ನಿನಗಾರೂ ಸಾಟಿಯಿಲ್ಲ.
ಕಂಗಳ ತುಂಬಾ ಬೆಳದಿಂಗಳು!
ಮನಸ್ಸಿನ ತುಂಬಾ ಕರುಣೆ!
ಮಾತುಗಳಲ್ಲಿ ಜೇನಿನಂತ ಮಧುರತೆ!
ಹಸಿವಾದಾಗ ಹೊಟ್ಟೆ ತುಂಬಿಸುವ ನಿನ್ನ ಮಾತೃತ್ವ!
ಪ್ರೀತಿಯಲ್ಲಿ ನಿನಗಿರುವ ಉತ್ಕಟತೆ!
ಇದಕ್ಕೆ ಬೆಲೆಯೇ ಕಟ್ಟಲಾಗಲ್ಲ!
ಆಕಾಶದಷ್ಟು ನಿನಗೆ,,,
ನನ್ನ ಜೀವನವೇ ನೀನಾಗಿರುವ ನಿನಗೆ,,
“”ಪತ್ನಿ”” ಎಂಬ ಎರಡಕ್ಷರ ಸಾಕೆ, ಉಹೂ ಸಾಲದು.
ನೀನೇ ನನ್ನ ಬಾಳ ಜ್ಯೋತಿಯಾಗಿರುವೆ,,
ನನ್ನ ಜೀವನದ ಮಣಿ ದೀಪವಾಗಿರುವೆ,,
ಹಾಲ್ಯಾವುದೋ ನೀರ್ಯಾವುದೋ ತಿಳಿಯದಷ್ಟು ಕಲೆತುಹೋಗಿರುವೆವು ನಾವು,,,
ಕತ್ತಲೋ ಬೆಳದಿoಗಳೋ ಒಟ್ಟಾಗಿ ಸಾಗಿರುವೆವು,,,,
ಅರೆಕ್ಷಣ ಕೋಪ-ತಾಪ ಮೂಡಿದರೂ ಮರುಕ್ಷಣದಲ್ಲೇ ಮರೆತುಬಿಡುವ ನಾವು, ನಮ್ಮ ಅನುಬಂಧವು,,
ಕಷ್ಟವೋ ಸುಖವೋ ಹೃದಯದಲ್ಲಿ ನಿಂತು ನನ್ನ ಹೃದಯ ಬಡಿತವೇ
ನೀನಾಗಿರುವೆ,,
ಋಣವಿದ್ದು ಕಲೆತೆವೋ ಋಣ ತೀರಿಸಲೆಂದೇ ಕಲೆತೆವೋ ತಿಳಿಯದು.
ನಿಜಕ್ಕೂ ನೀನೊಂದು ಅದ್ಭುತ. ಪ್ರತಿಯೊಬ್ಬರ ಮನೆಯಲ್ಲೂ ,
ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನಿಗೆ ಆಕಾಶದಷ್ಟು ಪ್ರೀತಿ ಹಂಚುವವರಿಗೆ ಎರಡಕ್ಷರದ “ಪತ್ನಿ” ಖಂಡಿತ ಸಾಲದು, ಊಹೂ ಸಾಲದು.
ಓ ಮಿತ್ರರೇ ಇವಳಿಗೆ ಹೆಸರೊಂದ ಸೂಚಿಸುವಿರಾ —
“ಅಮ್ಮ” ಎನ್ನುವ ಪದಕ್ಕಿರುವ ಸಿಹಿತನ ಆ ಪದಕ್ಕಿರಲಿ
ಹೆಂಡತಿಯರನ್ನ ಪ್ರೀತಿಸುವ
ಎಲ್ಲರಿಗೂ ಅಂಕಿತ.
“ನಾನೊಬ್ಬ ಹೆಂಡತಿ ಪ್ರೇಮಿ”
~ಸಂಪಿಗೆ ವಾಸು, ಬಳ್ಳಾರಿ
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ