ಸಾಮುದಾಯಕವಾಗಿ ಮಾತನಾಡುವ ಭಯ ಕಾಡುತ್ತದೆ: ಜಿ ರಾಮಕೃಷ್ಣ

Team Newsnap
1 Min Read

ಇಂದಿನ ವ್ಯವಸ್ಥೆಯಲ್ಲಿ ನಾವು ಸಾಮುದಾಯಿಕವಾಗಿ ಮಾತನಾಡುವುದಕ್ಕೆ ಹೆದರುವ ಸನ್ನಿವೇಶದಲ್ಲಿದ್ದೇವೆ. ಹಂಪ ನಾಗರಾಜಯ್ಯನವರ ಅನುಭವ ನಮ್ಮಕಣ್ ಮುಂದಿದೆ ಎಂದು ಹಿರಿಯ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ವಿಷಾದ ವ್ಯಕ್ತಪಡಿಸಿದರು.

ಶನಿವಾರ ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಗಾಂಧಿ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ” 73ನೇ ಸರ್ವೋದಯ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನೂ ಇಪ್ಪತ್ತು ವರ್ಷಕ್ಕೆ ಗಾಂಧೀಜಿ ಹೆಸರು ಹೇಳಿದರೆ ಶಿಕ್ಷೆಯಾಗುವಂಥ ವಾತಾವರಣ ಬರುತ್ತದೆ. ಗಾಂಧೀಜಿ ಯವರನ್ನು ಸೈದ್ದಾಂತಿಕವಾಗಿಯೂ ಕೊಲ್ಲುವ ಮನಸ್ಸುಗಳು ನಮ್ಮ ಸುತ್ತಲಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಥಹವರೊಂದಿಗೆ ಜಟಾಪಟಿ ನಡೆಯಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಸಮುದಾಯದ ಆಕಾಂಕ್ಷೆಗಿಂತಲೂ ಯಾರೋ ಒಬ್ಬ ವ್ಯಕ್ತಿಯ ದುರಾಲೋಚನೆಗೆ ಪ್ರತಿಕ್ರಿಯೆ ದೊರೆಯುತ್ತದೆ.ಆದರೆ, ಕಟ್ಟಕಡೆಯ ವ್ಯಕ್ತಿಗೂ ಮಾನ್ಯತೆ ಇಲ್ಲ. ಅವರ ಅಭಿವೃದ್ಧಿಗೆ ಬೇಕಾದ ವಾತಾವರಣವೂ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಗಾಂಧೀಜಿಯವರ ಸರ್ವೋದಯ ತತ್ವದ ಹಾಗೂ ಅಭಿವೃದ್ಧಿಯ ಬಗ್ಗೆ ಇಂದು ಪ್ರಶ್ನಿಸಿಕೊಳ್ಳಬೇಕಿದೆ. ಅಸಹನೆ, ಅಸಮಾನತೆ, ಅತಿಸಂಗ್ರಹ ಮಾರಕವಾಗಿದೆ. ಇವುಗಳನ್ನು ಇಲ್ಲವಾಗಿಸಲು ನಾವು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಚಿಂತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನ ಪ್ರಕಾಶ್, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಇತರರು ಹಾಜದ್ದರು.

Share This Article
Leave a comment