February 23, 2026

Newsnap Kannada

The World at your finger tips!

sp girish

ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಎಸ್ಪಿ ಗಿರೀಶ್ ತಂಡದಿಂದ ದಾಳಿ

Spread the love

ರಾಮನಗರ ಜಿಲ್ಲಾ ಎಸ್ಪಿ ಗಿರೀಶ್ ನೇತೃತ್ವದ ತಂಡ ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ
ಮಾಡಿ ರಾಮನಗರ ಜಿಲ್ಲಾ ಕಾರಾಗೃ ಸಿಬ್ಬಂದಿಗಳು ಹಾಗೂ ಕೈದಿಗಳನ್ನು ತಪಾಸಣೆ ನಡೆಸಿದರು.

ಈ ಕಾರಾಗೃಹದಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ತನಿಖೆಯಲ್ಲಿ ತಿಳಿದುಬಂದಿದೆ ಸುಮಾರು 70 ಸಿಗರೇಟ್ ಬಿಡಿ ಪ್ಯಾಕ್ ಗಳು ಪತ್ತೆಯಾಗಿವೆ ಹಾಗೂ 54000 ಸಾವಿರ ಹಣ ಪತ್ತೆಯಾಗಿದ್ದು ಗಾಂಜಾ ಸೇದುವ ಬಂಗಿ ಬ್ಲೇಡ್ ಚಾಕುಗಳು ಪತ್ತೆಯಾಗಿದೆ ಮತ್ತು 5 ಮೊಬೈಲ್ 6ಸಿಮ್ ಗಳು ಸಿಕ್ಕಿದ್ದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

police

ಈ ಎಲ್ಲಾ ವಸ್ತುಗಳು ಹೇಗೆ ಕಾರಾಗೃಹದ ಒಳಗಡೆ ಹೇಗೆ ಬಂದವು ಎಂಬುವುದನ್ನು ತನಿಖೆ ಆಗಬೇಕಿದೆ.‌

ಬೆಂಗಳೂರಿನ
ಕೇಬಲ್ ಕಿಟ್ಟಿ ಎಂಬ ಕೈದಿಯ ಹತ್ತಿರ 2 ಮೊಬೈಲ್ 2ಸಿಮ್ ಕಾರ್ಡ್ ಸಿಕ್ಕಿವೆ. ಅವನು ಬ್ಯಾಟರಾಯನಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ 3 ಕೊಲೆ ಕೇಸುಗಳಲ್ಲಿ ಭಾಗಿಯಾಗಿದ್ದಾನೆ. ಅವನು ಯಾರ ಜೊತೆ ಸಂಪರ್ಕ ಇದ್ದಾನೆ ಎಂಬುದು ತನಿಖೆ ಮುಖಾಂತರ ತಿಳಿದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದ್ದಾರೆ.

error: Content is protected !!