December 19, 2024

Newsnap Kannada

The World at your finger tips!

cricket,BCCI,Sports

sourav to resign as BCCI president?will Dada join BJP and enter to politics?

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ..? ಬಿಜೆಪಿ ಸೇರ್ಪಡೆಯೊಂದಿಗೆ ರಾಜಕೀಯಕ್ಕೆ ದಾದಾ ಎಂಟ್ರಿ?

Spread the love

30 ವರ್ಷ ಕ್ರಿಕೆಟ್ ಬದುಕು ಪೂರೈಸಿದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ –ನಾನು ಹನಿಟ್ರ್ಯಾಪ್ ಮಾಡಿಲ್ಲ : ಅನಂತರಾಜು ಜೊತೆ 6 ವರ್ಷ ಲಿವ್​ ಇನ್​ ರಿಲೇಶನ್​ಶಿಪ್ – ರೇಖಾ ಕಣ್ಣೀರು

1595441514 1594530325 sourav ganguly
Dada to resign as BCCI president

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿ ಹರಡಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವ ಕುರಿತು ಸುಳಿವು ನೀಡಿದ್ದಾರೆ.

ಸೌರವ್ ಗಂಗೂಲಿ ಅವರು 1992 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ಕ್ರಿಕೆಟ್ ತನಗೆ ಬಹಳಷ್ಟು ನೀಡಿದೆ ಎಂದು ಹೇಳುವ ರಹಸ್ಯ ಟ್ವೀಟ್ ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರವೇಶಿಸುವಾಗ ಅದೇ ರೀತಿಯ ಬೆಂಬಲವನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

ಅವರು ಮಾಡಿರುವ ಟ್ವೀಟ್ ರಾಜಕೀಯ ಸೇರುವ ಕುರಿತಂತೆ ಪುಷ್ಟಿ ನೀಡುವಂತಿದೆ. ಇತ್ತೀಚೆಗಷ್ಟೇ ಗಂಗೂಲಿ ನಿವಾಸಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಗಂಗೂಲಿ ಬಿಜೆಪಿ ಸೇರಬಹುದೆಂದು ಹೇಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!