February 23, 2026

Newsnap Kannada

The World at your finger tips!

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್‌ ನಲ್ಲೇ ಕಛೇರಿಗೆ ಬಂದ ಸೋನಿಯಾ ಅಳಿಯ ರಾಬರ್ಟ್ ವಾದ್ರಾ

Spread the love

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಆಫೀಸ್​​ಗೆ ಸೈಕಲ್​ನಲ್ಲೇ ಬಂದ ಸೋನಿಯಾ ಗಾಂಧಿ ಅಳಿಯ (ಪ್ರಿಯಾಂಕಾ ಪತಿ) ರಾಬರ್ಟ್​ ವಾದ್ರಾ ಪ್ರತಿಭಟನೆ ವ್ಯಕ್ತ ಮಾಡಿದರು.

ದೇಶದಲ್ಲಿ ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​​ ಹಲವು ಪ್ರತಿಭಟನೆಗಳನ್ನು ನಡೆಸುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್​ ವಾದ್ರಾ ಕೂಡ ತೈಲ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ.

ರಾಬರ್ಟ್​ ವಾದ್ರಾ ಪೆಟ್ರೋಲ್ ಡೀಸಲ್ ಬೆಲೆ ಏರಿಕೆಯನ್ನು ಖಂಡಿಸಿ, ಇಂದು ಪ್ರತಿಭಟನೆಯ ಸಂಕೇತವಾಗಿ ಸೈಕಲ್ ಸವಾರು ಮಾಡಿದರು.

ದೆಹಲಿಯ ಖಾನ್​ ಮಾರ್ಕೆಟ್​​ನಿಂದ ತಮ್ಮ ಕಚೇರಿವರೆಗೆ ಸೈಕಲ್​​ನಲ್ಲಿ ಬಂದರು.

ಇದೇ ವೇಳೆ ಮಾತನಾಡಿದ ವಾದ್ರಾ, ಪ್ರಧಾನಿ ಮೋದಿ ಎ.ಸಿ ಕಾರ್​ನಿಂದ ಹೊರಬಂದು, ಜನರು ಹೇಗೆ ಬಳಲುತ್ತಿದ್ದಾರೆ ಸನ್ನದನ್ನು ನೋಡಬೇಕು. ಆಗ ಬಹುಶಃ ಇಂಧನ ಬೆಲೆಯನ್ನು ಕಡಿಮೆ ಮಾಡಬಹುದು ಎಂದು. ಅವರು ಎಲ್ಲದಕ್ಕೂ ಇತರರನ್ನು ದೂಷಿಸಿ, ಮುಂದೆ ಸಾಗ್ತಾರೆ ಅಂತ ಮೋದಿ ವಿರುದ್ಧ ಹರಿಹಾಯ್ದರು.

error: Content is protected !!