100ಕ್ಕೂ ಹೆಚ್ಚು ಜನ ಸೇರುವ ಕಡೆ ಸಿಸಿಟಿವಿ ಅಳವಡಿಕೆ- ಸಮೀಕ್ಷೆಗೆ ಕಮೀಷನರ್ ಸೂಚನೆ

Team Newsnap
1 Min Read

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲು ಸಮೀಕ್ಷೆ ಮಾಡಲು ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ವಲಯದ ಡಿಸಿಪಿಗಳಿಗೆ ನಿರ್ದೇಶನ ನೀಡಿದ್ದಾರೆ.

100ಕ್ಕಿಂತ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕುರಿತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕಮಲ್ ಪಂತ ಸೂಚಿಸಿದ್ದಾರೆ.

ಕರ್ನಾಟಕ ನಾಗರಿಕರ ಸುರಕ್ಷಾ ಕಾಯ್ದೆ 2018ರ ಅನ್ವಯ ಜನರ ರಕ್ಷಣೆ ಸಲುವಾಗಿ 100ಕ್ಕಿಂತ ಹೆಚ್ಚಿನ ಜನ ಸೇರುವ ವಾಣಿಜ್ಯ ಸಂಕೀರ್ಣ, ಧಾರ್ಮಿಕ ಕೇಂದ್ರಗಳು, ಮಾಲ್​​ಗಳು, ಆಸ್ಪತ್ರೆ ಮುಂತಾದ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕಿದೆ.

ಈ ಕಾಯ್ದೆ ಜಾರಿಗೊಂಡ ಬಳಿಕವೂ ಕೆಲವರು ಜಾಗೃತವಾಗಿಲ್ಲ. ಹೀಗಾಗಿ ಪ್ರತಿ ಠಾಣಾ ಮಟ್ಟದಲ್ಲೇ ನಾಗರಿಕರ ಸುರಕ್ಷಾ ಕಾಯ್ದೆ ಅನುಷ್ಠಾನದ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ.

ಈ ಮೂಲಕ ಕಾನೂನು ಉಲ್ಲಂಘಿಸಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲು ನಿರ್ಧಾರ ಮಾಡಲಾಗಿದೆ.

Share This Article
Leave a comment