ಮೃತ ದೇಹವನ್ನು ಸಾಗಿಸಲು ಯಾವುದೇ ಆಂಬುಲೆನ್ಸ್ ಹಾಗೂ ಆಟೋ ಸಿಗದ ಕಾರಣ ವ್ಯಕ್ತಿಯೊಬ್ಬರು, ತಾಯಿಯ ಶವವನ್ನು ಬೈಕ್ನಲ್ಲಿ ಸಾಗಿಸಿದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ದಾರುಣ ಘಟನೆ ನಡೆದಿದೆ.
ಜಿ. ಚೆಂಚು (50) ಅಸ್ವಸ್ಥರಾಗಿದ್ದರು. ಕೂಡಲೇ ಆಕೆಯ ಪುತ್ರ ನರೇಂದ್ರ ಹಾಗೂ ಅಳಿಯ ರಮೇಶ್ ನೀಲಾಮಣಿ ದುರ್ಗಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಕೊರೋನಾ ಸೋಂಕಿತ ಲಕ್ಷಣವನ್ನು ಹೊಂದಿದ್ದ ರಾಜ್ಯದಚೆಂಚುಗೆ ಸಿಟಿ ಸ್ಕ್ಯಾನ್ಗಾಗಿ ಶ್ರೀ ಕೃಷ್ಣ ಡಯಾಗ್ನೊಸ್ಟಿಕ್ ಕೇಂದ್ರದಲ್ಲಿ ಈಕೆಗೆ ಸ್ಕ್ಯಾನಿಂಗ್ ಮಾಡಲಾಯ್ತು. ಈಕೆಯ ಸ್ಕ್ಯಾನಿಂಗ್ ವರದಿ ಬರೋದಕ್ಕೂ ಮುನ್ನವೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಆಕೆಯ ಶವ ಸಾಗಿಸಲು ಯಾರೂ ಮುಂದೆ ಬಾರದ ಕಾರಣ ಪುತ್ರ ಹಾಗೂ ಅಳಿಯ ಬೈಕ್ನಲ್ಲಿಯೇ ಶವವನ್ನು ಸಾಗಿಸಿದ್ದಾರೆ. ಈಕೆಯ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ