ಮಂಡ್ಯ ಸ್ಥಬ್ಧ – 15 ದಿನದ ಲಾಕ್ ಡೌನ್ : ಮೊದಲ ದಿನ ಜನರ ಭಾರಿ ಸ್ಪಂದನ – ಪೋಲಿಸ್ ಬಂದೋ ಬಸ್ತು‌

Team Newsnap
1 Min Read

ಕೊರೋನಾ ಮಾಹಾ ಸುನಾಮಿಯನ್ನು ತಡೆಗಟ್ಟಲು ಸರ್ಕಾರದ ಘೋಷಣೆ ಮಾಡಿರುವ 15 ದಿನ ಲಾಕ್ ಡೌನ್ ( ಬಿಗಿ ಕ್ರಮಗಳು) ಮೊದಲ ದಿನ ಯಶಸ್ವಿ ಯಾಗಿದೆ.

ಬುಧವಾರ ಬೆಳಿಗ್ಗೆ 10 ಗಂಟೆಯಿಂದಲೇ ಮಂಡ್ಯ ಸೇರಿದಂತೆ ಜಿಲ್ಲೆಯಲ್ಲಿ ಸಂಪೂರ್ಣ ಸ್ಥಬ್ಧವಾಯಿತು. ಔಷಧ ಅಂಗಡಿಗಳು ಮಾತ್ತು ಆಸ್ಪತ್ರೆ ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಅಂಗಡಿಗಳು,ಹೋಟೆಲ್ ಗಳು ಮುಚ್ಚಿ ದ್ದವು. ಸಂಚಾರ ಸ್ಥಬ್ಧವಾಗಿತ್ತು.

mandya

ಮಂಡ್ಯ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತು ಹಾಕಲಾಗಿದೆ. ಜನರ ಓಡಾಟ ಸಂಪೂರ್ಣವಾಗಿ ಸ್ಥಗಿತ ಗೊಂಡಿದೆ. ಲಾಕ್ ಡೌನ್ ಬೆಂಬಲ ಸೂಚಿಸಿ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

mandya4

ನಗರದ ಪ್ರಮುಖ ರಸ್ತೆಗಳು, ಬಸ್ ಸ್ಟ್ಯಾಂಡ್ ಗಳು ಬಿಕೋ ಎನ್ನುತ್ತಿದ್ದವು. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜನರು ಮನೆಯಲ್ಲಿ ಕಾಲ ಕಳೆಯಲು ಈ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡರು.

Share This Article
Leave a comment